ಪರ್ನೆಲ್ ಮೊಹಲ್ಲಾದಲ್ಲಿ ಕೋವಿಡ್ ಲಸಿಕೆ ವಿತರಣಾ ಅಭಿಯಾನ

0
116

ಸುರಪುರ: ನಗರದ ರಂಗಂಪೇಟೆಯ ವಾರ್ಡ್ ಸಂಖ್ಯೆ ೨೨ ರ ಪರ್ನೆಲ್ ಮೊಹಲ್ಲಾದಲ್ಲಿ ಶನಿವಾರ ಬೆಳಿಗ್ಗೆ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ನಡೆಸಲಾಯಿತು.

ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಗಫೂರ ನಗನೂರಿ ಸ್ವತಃ ತಾವೇ ಲಸಿಕೆ ಪಡೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಹಾಗು ವಾರ್ಡ್‌ನ ಸದಸ್ಯರು ಮತ್ತು ಮುಖಂಡರಾದ ಲಿಯಾಖತ್ ಹುಸೇನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Contact Your\'s Advertisement; 9902492681

ಬೆಳಿಗ್ಗೆಯಿಂದ ನಡೆದ ಲಸಿಕೆ ವಿತರಣೆಯಲ್ಲಿ ಒಟ್ಟು ೨೦೬ ಜನರಿಗೆ ಲಸಿಕೆಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಪರ್ಕಿ ಮಸೀದ್ ಶೈನಾಜ್ ಬೇಗಂ,ಪರ್ನೆಲ್ ಮೊಹಲ್ಲಾ ಬೀಬಿ ರಫೀಯಾ,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅನೇಕ ಜನ ಮುಖಂಡರು ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here