Tuesday, July 16, 2024
ಮನೆಬಿಸಿ ಬಿಸಿ ಸುದ್ದಿಪತ್ರಿಕಾ ಭವನ ಉಳಿದ ಕಾಮಗಾರಿಗೆ ಸಚಿವ ನಿರಾಣಿ ಭರವಸೆ

ಪತ್ರಿಕಾ ಭವನ ಉಳಿದ ಕಾಮಗಾರಿಗೆ ಸಚಿವ ನಿರಾಣಿ ಭರವಸೆ

ಕಲಬುರಗಿ: ಪತ್ರಿಕಾ ಭವನದ ಉಳಿದ ಕಾಮಗಾರಿಗೆ ಅಗತ್ಯ ಆರ್ಥಿಕ ನೆರವು ನೀಡಿ ಪೂರ್ಣಗೊಳಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನಕ್ಕೆ ಭೇಟಿ ನೀಡಿ, ಸಮಗ್ರವಾಗಿ ಪತ್ರಿಕಾ ಭವನ ವೀಕ್ಷಿಸಿದರು. ನಂತರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೊದಲನೇ ಮಹಡಿಗೆ ಮುಗಿದಿದೆಯಾದರೂ ಅಗತ್ಯ ಪೀಠೋಪಕರಣ ಹಾಗೂ ಇತರ ಸೌಕರ್ಯ ಕಲ್ಪಿಸಬೇಕಿದೆ. ಮುಖ್ಯವಾಗಿ ಅತಿಥಿಗೃಹಗಳನ್ನು ಪೂರ್ಣಗೊಳಿಸಲಾಗುವುದು. ಜತೆಗೆ ಪತ್ರಿಕಾ ಭವನದ ಹಳೆ ಕಟ್ಟಡಗಳನ್ನು ನೆಲಸಮಗೊಳಿಸಿ ಸ್ವಚ್ಚತೆಗೆ ಅದ್ಯತೆ ನೀಡಲಾಗುವುದು. ಒಟ್ಟಾರೆ ಮುಂದಿನ ದಿನಗಳಲ್ಲಿ ಆದಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಠಪಡಿಸಿದರು.

ಪತ್ರಿಕಾರಂಗ ನಾಲ್ಕನೇ ಅಂಗವಾಗಿದೆ. ಮೂರು ಅಂಗಗಳು ಸರಿಯಾಗಿ ನಡೆಯುವಂತಾಗಲು ಮಾಧ್ಯಮ ಕ್ಷೇತ್ರದ ಕಾರ್ಯವೇ ಮುಖ್ಯವಾಗಿದೆ. ಸರ್ಕಾರ ಬೀಳಿಸುವ ಹಾಗೂ ರಚನೆ ಮಾಡುವಂತಹ ಅಗಾಧ ಶಕ್ತಿ ಹೊಂದಿದೆ. ಖಡ್ಗಗಿಂತ ಲೇಖನಿ ಹರಿತವಾಗಿದೆ ಎಂದು ಸಚಿವರು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಹಾಗೂ ಇತರರು ಸಚಿವರು ಮನವಿ ಸಲ್ಲಿಸಿದರು.

ಇದಕ್ಕೂ ಮುಂಚೆ ಸಚಿವರು ಪತ್ರಿಕಾ ಆವರಣದಲ್ಲಿ ಸಸಿ ನೆಟ್ಟರು. ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್ ಶಶೀಲ್ ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀರ್ಲ ನರಿಬೋಳ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರಾಧ್ಯಕ್ಷ ಸಿದ್ಧಾಜೀ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular