ಕಲಬುರಗಿ: ಪರಿಸರ ಮೇಲೆ ಬಿರುತ್ತಿರುವ ವಿಪರಿತ ಪರಿಣಾಮ ಕುಗ್ಗಿಸಲು ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಸರಕಾರಿ ಬಸ್ಸಿಗೂ ಹೊಗೆ ತಪಾಸಣೆ ಖಡ್ದಾಯಗೊಳಿಸಬೇಕೆಂದು ಪರಿಸರ ಪ್ರೇಮಿ ಬಿ.ಜಯರಾಮ ಅವರು ಒತ್ತಾಯಿಸಿದ್ದಾರೆ.
ಬಸ್ಸಿನ ಹಿಂಬಾಲಿಸಿ ವಾಹನ ಚಲಾಯಿಸುವ ವೇಳೆ ಕಪ್ಪಗಿನ ದಟ್ಟವಾದ ಹೊಗೆ ಉಗುಳುತ್ತಾ ವಾಹನ ಚಾಲಕರಿಗೆ, ಪಾದಾಚಾರಿಗಳಿಗೆ, ಮಹಿಳೆಯರು, ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಕೊಡುವುದಲ್ಲದೇ, ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ.
ಎಲ್ಲಾ ರಸ್ತೆ ಸಂಚರಿಸುವ ವಾಹನಗಳಿಗೆ ಹೊಗೆ ತಪಾಸಣಾ ಕಡ್ಡಾಯ ಸರ್ಟಿಫಿಕೇಟ್ ಇರಬೆಕೆಂದು ನಿಯಮವಿದ್ದು, ತಪ್ಪಿದ್ದಲ್ಲಿ ಸಾಮಾನ್ಯ ಜನರು ದಂಡವನ್ನು ತರಬೆಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸರಕಾರಿ ಬಸ್ಸಿಗೂ ಈ ನಿಯಮವಿಲ್ಲವೆ? ಎಂದು ಸಾರ್ವಜನಿಕ ಜನಿಕರಿಗೆ ಪ್ರಶ್ನೆ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.