ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ರೈತರು ಇಗಾಗಲೆ ಮುಂಗಾರು ಬಿತ್ತನೆಯಲ್ಲಿ ಉದ್ದು, ಹೆಸರು, ಹತ್ತಿ, ತೊಗರಿ, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಜಿಲ್ಲೆತಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಲ ಗದ್ದೆಗಳಲ್ಲಿ ಸಂಪೂರ್ಣವಾಗಿ ನೀರು ಆವರಿಸಿರುವುದರಿಂದ ಬೆಳೆ ನಾಶವಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ ಆದರಿಂದ ರೈತರಿಗೆ ಪರಿಹಾರ ಧನವನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಎಸ್.ಬಿಲ್ವರ್ ತಿಳಿಸಿದ್ದಾರೆ.
ರೈತರು ಸಾಲ ಮಾಡಿ ಬಿತ್ತನೆ ಮಾಡಿದ ಈ ಬೆಳೆಗಳನ್ನು ಸಂಪೂರ್ಣವಾಗಿ ನಾಶವಾಗಿರುವುದರಿಂದ ರೈತರು ಕಂಗೆಟ್ಟು ಹೋಗಿದ್ದಾರೆ ಜಿಲ್ಲೆಯಲ್ಲಿ ಬರುವ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸರ್ವೆಯನ್ನು ಮಾಡಿ ಎಕರೆಗೆ ೨೫ ಸಾವಿರ ರೂಪಾಯಿ ಪರಿಹಾರ ಧನವನ್ನು ಘೋಷಿಸಬೇಕೆಂದು ಸಂಘಟನೆ ವತಿಯಿಂದ ಒತ್ತಾಯಿಸಲಾಗಿದೆ ಎಂದರು.
ಕಂದಾಯ ಹಾಗೂ ಕೃಷಿ ಅಧಿಕಾರಿಗಳನ್ನು ರೈತರು ಕೇಳಿದರೆ ಬೇಕಾಬಿಟ್ಟಿಯಾಗಿ ಉತ್ತರ ಕೊಡುತ್ತಿದ್ದಾರೆ. ಸರ್ವೆಯನ್ನು ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಸರಕಾರ ಇಗಾಗಲೆ ಸಹಕಾರ ಸಂಘ ಸಂಸ್ಥೆಗಳ ಮುಖಾಂತರ ರೈತರಿಗೆ ಸಾಲ ಕೊಡುತ್ತಿದ್ದಾರೆ. ಆದರೆ ಅಲ್ಲಿ ಪ್ರಭಾವಿ ವ್ಯಕ್ತಿಗಳ ಮುಖಾಂತರ ರೈತರ ಸಾಲ ಸಿಗುತ್ತಾ ಇದೆ ಅದನ್ನು ಕೂಡ ಸರಕಾರ ತಡೆ ಹಿಡಿಯಬೇಕೆಂದು ಜಿಲ್ಲೆಯ ರೈತರ ಪರವಾಗಿ ಒತ್ತಾಯಿಸಲಾಗಿದೆ ಎಂದರು.
ಸಹಕಾರ ಸಂಘ ಹಾಗೂ ರಾಷ್ಟ್ರೀಯಕೃತ ಬ್ಯಾಂಕ್‌ಗಳ ಮುಖಾಂತರ ರೈತರಿಗೆ ಸಾಲ ಕೊಡುತ್ತದೆ ಆದರೆ ರೈತರಿಗೆ ಅಲ್ಲಿ ಗೊತ್ತಿಲ್ಲದ ಹಾಗೆ ಇನ್ಸೂರೇನ್ಸ್ ಕಂಪನಿಯವರಿಗೆ ಹಣ ಸಂದಾಯವಾಗುತ್ತದೆ ಅದು ಕೂಡ ರೈತರಿಗೆ ಮೋಸವಾಗುತ್ತಿದೆ. ಜಿಲ್ಲೆಯಲ್ಲಿನ ಕೃಷಿ ಅಧಿಕಾರಿಗಳಿಗೆ ಕೇಳಿದರೆ ಸರಿಯಾಗಿ ಸ್ಪಂದನೆ ಮಾಡದೆ ಬೇಕಾಬಿಟ್ಟಿಯಾಗಿ ಉತ್ತರ ಕೊಡುತ್ತಿದ್ದಾರೆ ಅದು ಕೂಡ ಸರಕಾರ ತಡೆ ಹಿಡಿಯಬೇಕೆಂದು ಒತ್ತಾಯಿಸಿ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಕುಮಾರ ಕಾಂಬಳೆ, ಬಸವರಾಜ ಆನೂರ, ಅಂಬ್ರೀಶ್ ಗೂಡುರ, ಅಮೃತ ಮಡಬೂಳ, ಶ್ಯಾಮರಾವ ಸಂಗಾವಿ, ವೈಜನಾಥ ಕೊಂಡ ಸೇರಿದಂತೆ ಇನ್ನಿತರರು ಇದ್ದರು.