ದಿ.ಬಿ.ಎಂ.ಪಾಟೀಲ್‍ರವರ ಪುಣ್ಯಸ್ಮರಣೆ ನಾಳೆ

0
25

ವಿಜಯಪುರ 26. ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಿಮರಾದ ಡಾ.ಫ.ಗುಹಳಕಟ್ಟಿ, ಪೂಜ್ಯ ಬಂಥನಾಳ ಸಂಗನಬಸವ ಶಿವಯೋಗಿಗಳ, ಮಹಾದಾನಿ ಬಂಗಾರಮ್ಮ ಸಜ್ಜನರವರ ಜನ್ಮದಿನ ಹಾಗೂ ಶಿಕ್ಷಣ ಪ್ರೇಮಿ ದಿ.ಬಿ.ಎಂ.ಪಾಟೀಲ್‍ರವರ ಪುಣ್ಯಸ್ಮರಣೆ ನಿಮಿತ್ತ ನಾಳೆ ದಿ.27 ಮಂಗಳವಾರ ಬೆ.9ಗಂ. ಸ್ಮರಣೋತ್ಸವ ಡಾ.ಫ.ಗು.ಹಳಕಟ್ಟಿ ಭವನದಲ್ಲಿ ಜರುಗಲಿದೆ ಎಂದು ಚಿಂತನ-ಸಾಂಸ್ಕೃತಿಕ ಬಳಗ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.

ಖ್ಯಾತ ಚರ್ಮರೋಗ ತಜ್ಞ ಡಾ.ಅರುಣ.ಚಂ.ಇನಾಮದಾರ ಅವರು 12ನೇ ಶತಮಾನದ ಶರಣ ಅಲ್ಲಮಪ್ರಭುಗಳ ವಚನದ ಇಂಗ್ಲೀಷನಲ್ಲಿ ಅನುವಾದಿಸಿದ “ರೇಡಿಯನ್ಸ್ ಆಫ್ ವಚನ” ಗ್ರಂಥವನ್ನು ಬಿ.ಎಲ್.ಡಿ.ಇ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲರವರು ಬಿಡುಗಡೆಗೊಳಿಸಲಿದ್ದಾರೆ.

Contact Your\'s Advertisement; 9902492681

ಬಿ.ಎಂ.ಪಾಟೀಲ್ ಫೌಂಡೇಶನ್ ಏರ್ಪಡಿಸಿದ 6ನೇ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ವಿಜೇತರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಆರ್.ಎಸ್.ಮುಧೋಳ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ಪತ್ರಕರ್ತ ರಾಜು ವಿಜಾಪುರ ಮುಖ್ಯಅತಿಥಿಗಳಾಗಲಿದ್ದು, ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಅಧ್ಯಕ್ಷ ಜಿ.ಕೆ.ಪಾಟೀಲ, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮ ಏರ್ಪಡಿಸಿದ್ದು, ಆನ್‍ಲೈನ್ https://www.youtube.com/channel/UCfsipaCvS8yM9BP3ReZhcBQ ಲಿಂಕ್ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here