ಯುವ ಸಾಹಿತಿಗಳಿಗೆ ಬಸವ ಪುರಸ್ಕಾರ ಪ್ರೇರಣೆಯಾಗಲಿ: ಪ್ರೊ. ದಯಾನಂದ್

0
52

ಕಲಬುರಗಿ: ನಾಡಿನ ಯುವ ಸಾಹಿತಿಗಳಿಗೆ ಇಂದು ಪ್ರಧಾನ ಮಾಡಿದ ಬಸವ ಪುರಸ್ಕಾರ ಪ್ರೇರಣೆಯಾಗಲಿ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊಫೆಸರ್ ದಯಾನಂದ್ ಅಗಸರ್ ಹೇಳಿದರು.

ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ಹಮ್ಮಿಕೊಂಡ ಮೂರನೇ ವರ್ಷದ ಬಸವ ಪುರಸ್ಕಾರ ಸಮಾರಂಭದಲ್ಲಿ ಮಾತನಾಡುತ್ತಾ ಬಸವಣ್ಣನವರ ಆಚಾರ ವಿಚಾರ ಅವರ ವಚನಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಬಾಳು ಉತ್ತಮವಾಗುತ್ತದೆ ಎಂದು ಅಗಸರ್ ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ. ಎಚ್ . ಟಿ. ಫೋತೆ ಅವರು ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಇಂದಿನ ಸಮಾಜದ ಯುವ ಪೀಳಿಗೆಗಳು ಅನುಸರಿಸಿಕೊಂಡು ಹೋದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ನಿರ್ಮೂಲನೆಗಾಗಿ ಹಾಗೂ ಮಹಿಳೆಯರ ಸಮಾನತೆಗಾಗಿ ವಚನಗಳ ಮೂಲಕ ಅರಿವು ಮೂಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಹಿತಿ ಬಿ ಎಚ್ ನಿರಗುಡಿ ಇವರು ಶರಣಗೌಡ ಪಾಳಾ ಅವರು ಪಾಳಾ ಗ್ರಾಮದಲ್ಲಿ ಅಶ್ವಾರೂಢ ಬಸವೇಶ್ವರ ಮೂರ್ತಿಯನ್ನು ಸ್ಥಾಪನೆ ಮಾಡಿ ಇದರ ಅಂಗವಾಗಿ ನಾಡಿನ ಸಾಹಿತಿಗಳ ಕೃತಿಗೆ ಬಸವ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಅತಿಥಿಗಳಿಗೆ ಸ್ವಾಗತಿಸಿ.ನಿರಂತರವಾಗಿ ಸಾಮಾಜಿಕ ಧಾರ್ಮಿಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಖ್ಯಾತಿಯನ್ನು ಗಳಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸುವುದಾಗಿ ಅಧ್ಯಕ್ಷ ಶರಣಗೌಡ ಪಾಟೀಲ್ ತಿಳಿಸದರು.

ರಾಷ್ಟ್ರೀಯ ಬಸವ ಪುರಸ್ಕಾರ: ಎಚ್,ಟಿ ಪೋತೆ, ಸಿದ್ದರಾಮ ಹೊನ್ಕಲ್, ಶಶಿಕಲಾ ನಾಡಗೌಡ, ಪದ್ಮಾಕರ ಅಶೋಕ ಕುಮಾರ ಮಟ್ಟಿ, ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರ; ಲಿಂಗಾರೆಡ್ಡಿ ಶೇರಿ, ವೆಂಕಟೇಶ, ಕೆ, ಜನಾದ್ರಿ, ಅಬ್ಬಾಸ್ ಆಲಿ ಎ, ನದಾಫ್, ಶರಣಮ್ಮ ಬಿ, ಪಾಟೀಲ್ ರಾಜ್ಯ ಬಸವ ಪುರಸ್ಕಾರ; ಅಜಿತ್ ಹರೀಶಿ, ನಿಂಗನಗೌಡ ದೇಸಾಯಿ, ಲಕ್ಷ್ಮಿಕಾಂತ ಮಿರಜಕರ, ಗುರುದೇವಿ ಹುಲೆಪ್ಪನವರಮಠ, ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿಎಂ ಮನುರ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಷಿ, ವೆಂಕಟೇಶ್ ನೀರಡ್ ಗಿ, ಮನು ಸಾಗರ್, ಶ್ರೀಶೈಲ್ ನಾಗರಾಳಾ, ಚಿ, ಸಿ ಲಿಂಗಣ, ಸೂರ್ಯಕಾಂತ್ ಸುಜಾತ, ಮೈಪಾಲ್ ರೆಡ್ಡಿ 300, ನರಸಿಂಗರಾವ್ ಹೇಮನೂರ್, ಪ್ರೊ ಬಿಹಾರ್ ಅಣ್ಣ ಸಗರ್,ಸುರೇಶ್ ಬಡಿಗೇರ್, ಸುಜಾತ ಜಂಗಮ್ ಶೆಟ್ಟಿ, ಎಂ ಬಿ ಕಟ್ಟಿ ಸಂಗಮೇಶ್ ಹಿರೇಮಠ್, ವೇದ, ಕುಮಾರ್ ನಾಗಪ್ಪ ಗೋಗಿ ಪ್ರಜಾಪತಿ, ಕುಮಾರ್ ನಾಗರಾಜ್, ಕುಮಾರ್ ಸುಭಾಶ್ಚಂದ್ರ ಪಾಟೀಲ್, ವಿಶ್ವನಾಥ್ ಗೌನಳ್ಳಿ, ಪರಮೇಶ್ವರ್ ಸೂರ್ಯಕಾಂತ್ ಪಾಟೀಲ್ ಮಾಪಣ್ಣ ಪಾಳಾ, ಮುಂತಾದವರು ಉಪಸ್ಥಿತ ಇದ್ದರು, ಕಾರ್ಯಕ್ರಮದ ನಿರೂಪಣೆ ಶರಣಬಸಪ್ಪ ವಡ್ಡನಕೇರಿ ವಚನ ಗಾಯನ, ಲಕ್ಷ್ಮೀಶಂಕರ ಜೋಶಿ, ವಂದನಾರ್ಪಣೆ ಶಿವಶಂಕರ್ ಬಿರಾದಾರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here