ಪ್ರೊ. ಪೋತೆಯವರಿಗೆ ಗೊರುಚ ಜಾನಪದ ಪ್ರಶಸ್ತಿ

0
79

ಕಲಬುರಗಿ: ಉತ್ತರ ಕರ್ನಾಟಕದ ಅಪ್ಪಟ ದೇಶಿ ಪ್ರತಿಭೆ. ಹೋರಾಟದ ಬದುಕನ್ನು ಕಟ್ಟಿಕೊಂಡ ಬಗೆ ವಿಶ್ಮಯವಾದುದು. ಮಾನಸಿಕ ಬಂಧನದಲ್ಲಿಟ್ಟಿರುವ ಮಾನವೀಯ ಬಿಡುಗಡೆಗಾಗಿ ಸದಾ ಮಿಡಿಯುವ, ನಿರಾಕರಣೆಗೊಳಗಾದವರ ನತದೃಷ್ಟ ಬದುಕಿನ ನರಳಾಟದ ಮುಕ್ತಿಗಾಗಿ ಪರಿತಪಿಸುವ, ಗುಲಾಮಗಿರಿಯನ್ನು ಗಂಟುಮೂಟೆ ಕಟ್ಟುವ ಕನಸನ್ನು ಹೆತ್ತಿರುವ, ಸಂಪ್ರದಾಯಸ್ಥ ವ್ಯವಸ್ಥೆಯ ಅಸಡ್ಡೆಯನ್ನು ಅಳುಕಿಲ್ಲದೆ ಪ್ರಶ್ನಿಸುವ, ವರ್ತಮಾನದ ಬದುಕಿನ ಜರೂರನ್ನು ಅರಿತಿರುವ ಅಪರೂಪದ ಅಕ್ಷರಶಿಲ್ಪಿ ಪ್ರೊ. ಪೋತೆ.

ಅಧ್ಯಯನ, ಅಧ್ಯಾಪನ ಮತ್ತು ಸೃಜನ ಪ್ರಪಂಚದೊಂದೆಗಿನ ಸತತ ಮಂಥನ ಈ ಮೂರು ಮೇಳೈಸಿಕೊಂಡಿರುವ ನಿಜಾಕ್ಷರ ಜೀವಿ. ಸುತ್ತಣ ಸಮಾಜವನ್ನು ಅಪ್ಯಾಯತೆಯಿಂದ ಅಪ್ಪಿಕೊಳ್ಳುವುದು ಬದುಕಿನ ಗುಣ. ಮಾತು ಹೃದಯದಿಂದ ಮೂಡುವುದು ಅವರ ಭಾಷೆಯ ಗುಣ. ಗೀಚಿದ ಅಕ್ಷರ ಬದುಕಿನ ಭಾಗವಾಗಿರುವುದು ಬರಹದ ಗುಣ. ಬುದ್ಧನ ಬದುಕು, ಅಂಬೇಡ್ಕರ್ ಪ್ರಜ್ಞೆ, ಶರಣರ-ದಾಸರ ಚಿಂತನೆಗಳ ದಟ್ಟ ಪ್ರಭಾವ ಇವರ ಬರಹ ಹಾಗೂ ಬದುಕಿನಲ್ಲಿದೆ. ಮಣ್ಣಿನ ವಾಸನೆಯಿಂದ ಕೂಡಿದ ಆಲೋಚನೆಗಳು, ದೇಶಿ ಭಾಷಾಸತ್ವ; ಗಾಢ ಜೀವನಾನುಭವ ಇವರ ಸಾಹಿತ್ಯದ ಸ್ಥಾಯಿ.

Contact Your\'s Advertisement; 9902492681

ಕಥೆ, ಪ್ರಬಂಧ, ಕಾದಂಬರಿ, ವಿಚಾರ-ವಿಮರ್ಶೆ, ಜೀವನ ಚರಿತ್ರೆಗಳು, ಜಾನಪದ ಹಾಗೂ ಸಂಶೋಧನ ಕ್ಷೇತ್ರದಲ್ಲಿ ಸುಮಾರು ನೂರಕ್ಕು ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಂಬೇಡ್ಕರ್ ಭಾರತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಜ್ಞಾನ-ವಿಜ್ಞಾನ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಸಮಾಜೋ ಜಾನಪದ ಕೃತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಾಬಾಸಾಹೇಬರೆಡೆಗೆ ಖರ್ಗೆ ಜೀವನಕಥನ ಪುಸ್ತಕ ಸೊಗಸು ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡುವ ಅಮೃತಹತೋತ್ಸವ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಎಲ್. ಬಸವರಾಜು ದತ್ತಿ ಪ್ರಶಸ್ತಿ ಅಂಬೇಡ್ಕರ್ ಪುಸ್ತಕಪ್ರೀತಿ ಹಾಗೂ ದಲಿತಲೋಕ ಕೃತಿಗಳಿಗೆ ಲಭಿಸಿದೆ. ಇತ್ತೀಚಿಗೆ ಮಾನ್ಯಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟು ಹಬ್ಬದ ಅಂಗವಾಗಿ ಬಾಬಾಸಾಹೇಬರೆಡೆಗೆ ಖರ್ಗೆ ಜೀವನಕಥನ ಕೃತಿಯು ಬಿಡುಗಡೆಗೊಂಡಿದೆ.

ದಿನಾಂಕ ೦೧ ಅಗಸ್ಟ್ ೨೦೨೧ ಭಾನಾವಾರದಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಪ್ರೊ. ಎಚ್.ಟಿ. ಪೋತೆಯವರಿಗೆ ಗೊ.ರು.ಚ. ಜಾನಪದ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಮೈಸೂರಿನ ನವಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಪ್ರೊ. ಎಚ್.ಟಿ. ಪೋತೆಯವರ ಜಾನಪದ ಕ್ಷೇತ್ರದ ಸಾಧನೆ ಪರಿಗಣಿಸಿ ಗೊ.ರು.ಚ. ದತ್ತಿ ನಿಧಿ ಪ್ರಶಸ್ತಿ ದೊರೆತಿದೆ. ಸಮಾರಂಭದಲ್ಲಿ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರದ ಮಹಾಸ್ವಾಮಿಗಳು ಪೂಜ್ಯ ಜಗದ್ಗುರು ಡಾ. ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವರಾದ ಅರವಿಂದ ಲಿಂಬಾವಳಿವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಗೊ.ರು. ಚನ್ನಬಸಪ್ಪನವರು ಅಧ್ಯಕ್ಷತೆ  ವಹಿಸುವರು. ಪ್ರೊ. ಮಲೆಯೂರು ಗುರುಸ್ವಾಮಿ ಅವರು ಅಭಿನಂದನ ನುಡಿ ಆಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here