ಮನರೇಗಾ ಸಮರ್ಪಕ ಜಾರಿಗಾಗಿ ಸಂಘಟಿತರಾಗಿ: ಕೆ.ನೀಲಾ ಕರೆ

0
6

ರಾಯಚೂರು: ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪನಿಗಳನ್ನು ಭಾರತದಿಂದ ಹೊಡೆದೋಡಿಸಲು ರೈತ ಕೂಲಿಕಾರ್ಮಿಕರು ಒಗ್ಗೂಡಿ ಹೋರಾಡಬೇಕಿದೆ ಎಂದು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್)ಯ ರಾಜ್ಯ ಉಪಾಧ್ಯಕ್ಷೆ ಹಾಗೂ ಬರಹಗಾರ್ತಿ ಕೆ. ನೀಲಾ ಹೇಳಿದರು.

ವೀರಾಪೂರು ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘಟನೆ ಹಾಗೂ ಜನವಾದಿ ಮಹಿಳಾ ಸಂಘಟನೆ ಸಂಯೋಜನೆಯಲ್ಲಿ ನಡೆದ ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿ ಮಟ್ಟದ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಜನ ಸಂಪನ್ಮೂಲ ಹೆಚ್ಚಿಸಲು ಹಾಗೂ ಕೂಲಿಕಾರರ ಕುಟುಂಬಗಳ ಸುಸ್ಥಿರ ಬದುಕಿಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಯಾಗಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆಯ ಯಾದಗಿರಿ ಜಿಲ್ಲಾಧ್ಯಕ್ಷ ದೌಲ್ ಸಾಬ್ ಮಾತನಾಡಿ, ಬೇಸಾಯದಲ್ಲಿ ಕೃಷಿ ಕೂಲಿಕಾರರು ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಆದರೆ ಕೇಂದ್ರ ಸರ್ಕಾರ ಕೃಷಿ ಕೂಲಿಕಾರರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ದೇಶದಲ್ಲಿ ಋಣಮುಕ್ತಿ ಕಾನೂನು ಇಲ್ಲದೇ ಇರುವುದರಿಂದ ಕೂಲಿಕಾರರು ಮಾಡಿದ ಸಾಲವನ್ನು ವಾಪಾಸ್ ಕೊಡಲಾಗದೇ ಆತ್ಮಹತ್ಯೆ ಹಾದಿ ತುಳಿಯುತ್ತಾರೆ. ರೈತರು ಬೆಳೆದ ದವಸ ಧಾನ್ಯಗಳನ್ನು ಸರ್ಕಾರವೇ ಕೊಂಡುಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದ ಕ್ರಮೇಣ ಪಡಿತರ ವ್ಯವಸ್ಥೆಯೂ ರದ್ದಾಗಲಿದೆ ಎಂದರು.

ಗ್ರಾಪಂ ಸದಸ್ಯ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಲಾ ಹಿರೇಮಠ ನಿರೂಪಣೆ ಮಾಡಿದರು.

ಜೆಎಂಎಸ್ ನ ಮುಖಂಡರಾದ ಪದ್ಮಿನಿ, ವರಲಕ್ಷ್ಮೀ, ಕೆಪಿಆರ್ ಎಸ್ ನ ಜಿಲ್ಲಾಧ್ಯಕ್ಷ ಕೆ.ಜಿ.ವಿರೇಶ್, ಮಾನಪ್ಪ ಲೆಕ್ಕಿಹಾಳ, ಸದ್ಧಾ ಹುಸೇನ್, ಯಂಕಪ್ಪ, ನಿಂಗಪ್ಪ, ಲಿಂಗರಾಜ ದೇಸಾಯಿ, ಶಿವರಾಜ್ ಕಪಗಲ್, ರಾಜಮಹ್ಮದ್, ಮಹೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here