ಕಲಬುರಗಿ: ಕಲಬುರಗಿ ತಾಲೂಕಿನಲ್ಲಿ ಮುಂಗಾರು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ಮಾಡಿ ಪ್ರತಿ ಎಕರೆ ಜಮೀನಿಗೆ ೧೦ ಸಾವಿರ ರೂ ಪರಿಹಾರ ಘೋಷಿ ಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಭಾರಿ ಪ್ರಮಾಣದ ಮಳೆಯಿಂದ ಜನಜಾನುವಾರು ಸಂಕಷ್ಟ ಅನು ಭವಿ ಸುವಂತಾಗಿದೆ.ಕಳೆದ ವರ್ಷ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪುನೀತರಾಜ ಕವಡೆ, ದಸ್ತಯ್ಯ ಗುತ್ತೇದಾರ, ಅಶೋಕ ಗುತ್ತೇದಾರ, ಸಿದ್ದಣಗೌಡ ಮಾಲಿ ಪಾಟೀಲ, ಆನಂದ ಕುಸನೂರ, ಸಲೀಂ ಸರಡಗಿ, ಪ್ರಭು ಜಮಾದಾರ, ರುಕ್ಕಯ್ಯ ಯಳವಂತಗಿ, ಸಿದ್ಧಾರೋಡ ನಾಯಿಕೋಡಿ, ಶೇಖರ ಪಟ್ಟಗಾ, ಸುರೇಶ ಗುಲಾಬವಾಡಿ, ಲಕ್ಷ್ಮಣ ಪೂಜಾರಿ, ಸೈಯದ್ ಗುತ್ತೇದಾರ, ಪ್ರಭುಲಿಂಗ ಇದ್ದರು.