ಕಲಬುರಗಿ: ನಗರದ ಧರಿಯಾಪುರ-ಕೋಟನೂರ ಜಿಡಿಎ ಬಡಾವಣೆಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಕಲಬುರಗಿ ಪ್ರಾಂತೀಯ ಕಚೇರಿಯ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆಯನ್ನು ನಿಯಮಿತದ ಅಧ್ಯಕ್ಷ ಬಿ.ಹೆಚ್.ಕೃಷ್ಣಾರೆಡ್ಡಿ ನೆರವೇರಿಸಿದರು.
ಗುರುನಾಥ ಜ್ಯಾಂತೀಕರ್, ವಿಶ್ವನಾಥ ಹಿರೇಮಠ, ವೈಟಿ ಪಾಟೀಲ್, ತಿಮ್ಮಯ್ಯ ಶೆಟ್ಟಿ ಆರ್, ಸಂಜೀವ ಮಹಾಜನ, ಬಿ.ಶ್ರೀಧರ, ಪ್ರಸನ್ನಕುಮಾರ, ಶರಣಗೌಡ ಪಾಟೀಲ, ರಾಜಶೇಖರ ಹೆಚ್, ಹಾಗೂ ಸ್ಥಳಿಯ ಸಹಕಾರಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.