ಕಲಬುರಗಿ: ಗುಲ್ಬರ್ಗಾ ನಗರವನ್ನು ಕಲಬುರಗಿ ಎಂದು ಹೆಸರು ಬದಲಾವಣೆ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ 7 ಜನ ಹೋರಾಟಗಾರರಿಗೆ ಜಿಲ್ಲಾ ನ್ಯಾಯಲ ಖುಲಾಸೆಗೋಳ್ಳಿಸಿ ಆದೇಶ ಹೊರಡಿಸಿದೆ.
11 ನವೆಂಬರ್ 2014 ರಂದು ನಗರದ ಮುಸ್ಲಿಂ ಚೌಕ್ ಪ್ರದೇಶದಲ್ಲಿ ಗುಲ್ಬರ್ಗಾ ನಗರದ ಹೆಸರನ್ನು ಕಲಬುರಗಿ ಎಂದು ಬದಲಿಸಿದ ಸರಕಾರದ ನಡೆಯನ್ನು ವಿರೋಧಿಸಿ ಹೋರಾಟಗಾರರಾದ ನ್ಯಾಯವಾದಿ ಕಲೀಮ್, ಸಮಾಜಿಕ ಕಾರ್ಯಾಕರ್ತ ಶಕೀಲ್ ಅಹ್ಮದ್, ನ್ಯಾಯವಾದಿ ಸೈಯದ್ಮಜಹರ್ ಹುಸೇನಿ, ನ್ಯಾಯವಾದಿ ವಹಾಜ್ ಬಾಬಾ, ಸೈಯದ್ ಮೊಹ್ಮದ್ ಹಬಿಬ್ಬೋದ್ದಿನ್, ಎಸ್.ಡಿ.ಪಿ.ಐ ಜಿಲ್ಲಾ ಅಧ್ಯಕ್ಷ ಮೊಹ್ಮದ್ ಮೋಹಸಿನ್ ಹಾಗೂ ಸೀರಾಜ್ ಅಹ್ಮದ್ ತಂದೆ ತಾಜೋದ್ದಿನ್ ವಿರುದ್ಧ ಚೌಕ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದರು.
3 ಎಡಿಡಿಎಲ್. ಸಿವಿಲ್ ಜಡ್ಜ್ & JMFC ನ್ಯಾಯಧೀಶರಾದ ಬಸವರಾಜ್ ನೇಸಾರಗಿ ಪ್ರಕರಣದ ವಿಚಾರಣೆ ನಡೆಸಿ ಬುಧವಾರ ಪ್ರಕಣದಲ್ಲಿರುವ ಹೋರಾಟಗಾರರಿಗೆ ಖುಲಾಸೆಗೊಳ್ಳಿಸಿ ಪ್ರಕಟಣ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ನಿರಂತರ 7 ವರ್ಷಗಳ ಸಂಘರ್ಷದ ಬಳಿಕ ನಮಗೆ ನ್ಯಾಯಸಿಕ್ಕಿದೆ. ಇದು ಸಂವಿಧಾನದ ಗೆಲ್ಲುವು ಎಂದು ಎಸ್.ಡಿ.ಪಿ.ಐ ಮುಖಂಡ ಮೊಹ್ಮದ್ ಮೋಹಸಿನ್ ಸೇರಿದಂತೆ ಖುಲಾಸೆಗೊಂಡ ಎಲ್ಲಾ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.