ಶಾಶ್ವತ ನೆಲೆ ಕಾಣದ ಅಲೆಮಾರಿಗಳ ಬದುಕು ಅತಂತ್ರ: ಸಾಯಬಣ್ಣ ಹೆಳವರ

0
79

ಕಲಬುರಗಿ: ಸಮಾಜದಲ್ಲಿ ಅಲೆಮಾರಿ ಸಮುದಾಯ ಇಂದಿಗೂ ಶಾಶ್ವತವಾಗಿ ನೆಲೆ ಕಾಣದೆ ಹೊಟ್ಟೆಪಾಡಿಗಾಗಿ ಊರೂರು ಅಲೆಯುವಂತಾಗಿದೆ. ಅಲೆಮಾರಿ ಬುಡಕಟ್ಟುಗಳು ಇನ್ನೂ ಅತಂತ್ರ ಸ್ಥಿತಿಯಲ್ಲಿವೆ.

ಹೆಳವ ಸಮಾಜದ ರಾಜ್ಯ ನಿರ್ದೇಶಕರ ಬಸವರಾಜ ಹೆಳವರ ಯಾಳಗಿ ಅಲೆಮಾರಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ವಿದ್ಯಾರ್ಥಿ ನಿಲಯದ ಪ್ರವೇಶಾತಿಯಲ್ಲಿ ವಿಶೇಷ ಮೀಸಲಾತಿ ನೀಡಬೇಕು. ಅಲೆಮಾರಿ ಸಮುದಾಯಕ್ಕೆ ಪ್ರತಿ ಜಿಲ್ಲೆಗೊಂದು ಸಭಾಭವನ ನಿರ್ಮಿಸಬೇಕು. ಸರಕಾರಿ ಗೈರಾಣು ಭೂಮಿಯನ್ನು ಅಲೆಮಾರಿ ಆಶ್ರಯ ಕಾಲೋನಿಗಳಾಗಿ ಪರಿವರ್ತಿಸಬೇಕು.

Contact Your\'s Advertisement; 9902492681

ಸಮುದಾಯದ ವಿದ್ಯಾವಂತ‌ ಮತ್ತು ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಜಿಲ್ಲೆಯ ಮುಖಂಡರನ್ನು ಗುರುತಿಸಿ ಜಿಲ್ಲಾ ಸಲಹಾ ಸಮಿತಿಯ ನಾಮನಿರ್ದೇಶಕರನ್ನಾಗಿ ನೇಮಕ ಮಾಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗದಾರಿತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ವಿನಂತಿಸಿದರು.

ಅಖಿಲ ಕರ್ನಾಟಕ ಹೆಳವ ಸಮಾಜ, ಕಲಬುರಗಿ ಜಿಲ್ಲಾ ಘಟಕದ ಅದ್ಯಕ್ಷ ಸಾಯಬಣ್ಣ ಹೆಳವರ  ಅವರು ಭೂ ಖರೀದಿ (ಭೂ ಒಡೆತನ) ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು. ನಮ್ಮ ಸಮುದಾಯದವರಿಗೆ ನೇರ ಸಾಲ ಯೋಜನೆಗಳಲ್ಲಿ ನೀಡುತ್ತಿರುವ ಸಾಲದ ಮೊತ್ತವನ್ನು ರೂ.50,000/- ದಿಂದ ರೂ.1,00,000/- ಕ್ಕೆ ಹೆಚ್ಚಿಸಿ ಶೇ. 50% ಸಹಾಯಧನ ನೀಡಬೇಕು. ಅಲೆಮಾರಿ ಆಶ್ರಯ ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲೆಯಿಂದ 2015-16 ನೇ ಸಾಲಿನಲ್ಲಿ ವಸತಿಗಾಗಿ ಸಲ್ಲಿಸಿದ 444 ಅರ್ಜಿಗಳು ಇನ್ನೂ ಕೂಡ ಅನುಮೋದಿಸಿರಿವುದಿಲ್ಲ. ಈ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.

ಕಲಬುರಗಿ ನಗರಕ್ಕೆ ಆಗಮಿಸಿದ್ದ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಸನ್ಮಾನ ಸ್ವೀಕರಿಸಿ ಹೆಳವ ಸಮುದಾಯದ ಮುಖಂಡರ ಜೊತೆ ಚರ್ಚಿಸುತ್ತಾ, ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಡಿಯಲ್ಲಿ ಒಟ್ಟು 46 ಜಾತಿ ಸಮುದಾಯಗಳಿದ್ದು, ಇಂದಿಗೂ ಕೂಡ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿವೆ, ಇವರಿಗೆ ಶಾಶ್ವತ ಸುರು ಕಲ್ಪಿಸಿ ರಾಜ್ಯವನ್ನು ಗುಡಿಸಲು ಮುಕ್ತ ಮಾಡುವ ಕನಸಿದೆ ಮತ್ತು ಅಲೆಮಾರಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ಅಲೆಮಾರಿ ಸಮುದಾಯವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ನಿಗಮದಿಂದ ಸಮುದಾಯದ ಆರ್ಥಿಕ ಸಬಲತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇತರೆ ಸಮುದಾಯಗಳಂತೆ ಗೌರವಯುತ ಜೀವನ ನಡೆಸಲು ಎಲ್ಲಾ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ನಿವೇಶನ ಸೇರಿದಂತೆ ವಿವಿಧ ರಿತೀಯ ಸಾಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ನಿರ್ದೇಶಕ ರವಿಕುಮಾರ ರುಸ್ತಾಂಪುರ, ಕಲಬುರಗಿ ಜಿಲ್ಲಾ ಗೌರವಾದ್ಯಕ್ಷ ಮಲ್ಲಿಕಾರ್ಜುನ ಆರ್‌ ಹೆಳವರ ಹೆಬ್ಬಾಳ, ನಾಗಪ್ಪ ಹೆಳವರ,  ಅಶೋಕ ದೆಗಲಮಡಿ, ಲಕ್ಷ್ಮಣ ಹೆಳವರ, ತಿಪ್ಪಣ್ಣ ಹೆಳವರ ರಾಂಪೂರಹಳ್ಳಿ, ಅಶೋಕ ಹೆಳವರ ಮತ್ತು ಸಮಾಜದ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here