ಜಿಡಿಎ ಕಾಲೋನಿ ನಾಗರಿಕರಿಂದ ಉಚಿತ ಲಸಿಕೆ

0
11

ಕಲಬುರಗಿ: ಇಲ್ಲಿನ ಸ್ವಸ್ತಿಕ್ ನಗರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗಣೇಶನಗರ,ಸ್ವಸ್ತಿಕ್ ನಗರ, ಓಂ ನಗರ ಹಾಗೂ ಜಿಡಿಎ ಕಾಲೋನಿ ನಾಗರಿಕರಿಗಾಗಿ ಆಯೋಜಿಸಲಾಗಿದ್ದ ಉಚಿತ ಲಸಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಶರಣಬಸಪ್ಪ ಗಣಜಲಖೆಡ್ ಅವರು, ಕರುನಾ ಮೂರನೇ ಅಲೆ ಬರುವ ಮುಂಚೆಯೇ ಸಾರ್ವಜನಿಕರು ಕರೋನಾ ಲಸಿಕೆಯನ್ನು ಪಡೆದುಕೊಂಡು ಸದೃಢರಾಗಬೇಕು.

ಈ ನಿಟ್ಟಿನಲ್ಲಿ ನಾವು ಸಾರ್ವಜನಿಕರ ಹಿತಕ್ಕಾಗಿ ಕೊರೋನಾ ಲಸಿಕೆ ಶಿಬಿರ ಆಯೋಜಿಸಿದ್ದೇವೆ. ಸಾರ್ವಜನಿಕರು ಮುಂದೆ ಬಂದು ಕೊರನಾ ಲಸಿಕೆಯನ್ನು ಪಡೆಯಬೇಕು ಎಂದು ಹೇಳಿದರು.

Contact Your\'s Advertisement; 9902492681

ಇದೆ ಸಂದರ್ಭದಲ್ಲಿ ಮಾತನಾಡಿದ ಕೊರೊನ ಲಸಿಕಾ ಶಿಬಿರ ಆಯೋಜನೆ ಮಾಡಿದ ಆಮ್ ಆದ್ಮಿ ಪಕ್ಷದ ಜಿಲ್ಲಾ ವಕ್ತಾರೆ ಅಂಜನಾ ಯಾತನೂರ್,ಸಮಾಜದ ಪ್ರತಿಯೊಬ್ಬ ನಾಗರಿಕರು ಕೋರೋನ ಲಸಿಕೆ ಹಾಕಿಸಿ ಕೊಳ್ಳುವ ಮೂಲಕ ಸಶಕ್ತ ಹಾಗೂ ಸದೃಢ ದೇಶದ ನಿರ್ಮಾಣಕ್ಕೆ ಕೈಜೋಡಿಸಬೇಕು. ಈಗಾಗಲೇ ಮೂರನೇ ಅಲೆ ಆರಂಭವಾಗಿದ್ದು ಭಾರತದಾದ್ಯಂತ ಮೂರನೇ ಅಲೆ ಆರಂಭವಾಗುವ ಮುನ್ನ ಸಾರ್ವಜನಿಕರು ಲಸಿಕೆ ಪಡೆದು ಸದೃಢ ದೇಶ ಕಟ್ಟಲು ಕಂಕಣಬದ್ಧರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಡಾಕ್ಟರ್ ಶರಣಬಸಪ್ಪ ಗಣಜಲಖೇಡ ಹಾಗೂ ಡಾ.ಶಿವಕುಮಾರ್, ಮೌನ ಯೋಗಿ ಫೌಂಡೇಶನ್ನಿನ ರುಕ್ಮಿಣಿ ಹಿರೇಮಠ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶೇಖರ್ ಸಿಂಗ್, ದಕ್ಷಿಣ ಮತಕ್ಷೇತ್ರದ ಸಂಚಾಲಕ ಕಿರಣ ರಾಥೋಡ್, ಸಂಜೀವಕುಮಾರ್ ಕರಿಕಲ್, ಮೀರ್ ಮೋಸಿನ್ ಅಲಿಖಾನ್, ಹರ್ಷ ಯಾತನೂರ, ಸದಸ್ಯರಾದ ನಾಗರಾಜ ಗಿರಿ, ನಾಗರಾಜಗೌಡ ಮತ್ತು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ಲಸಿಕೆ ಪಡೆದುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here