ಕಲಬುರಗಿ: ತೋಟಗಾರಿಕೆ ಇಲಾಖೆಯಿಂದ 2021-22ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್.ಹೆಚ್.ಎಂ.) ಯೋಜನೆಯಡಿ ಅರ್ಹ ರೈತರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರದೇಶ ವಿಸ್ತರಣೆ, ವೈಯಕ್ತಿಕ ಕೃಷಿ ಹೊಂಡ, ಸಾಮೂಹಿಕ ಕೃಷಿ ಹೊಂಡ, ಯಾಂತ್ರೀಕರಣ, ಪ್ಯಾಕ್‍ಹೌಸ್, ಒಣದ್ರಾಕ್ಷಿ ಘಟಕ, ತಳ್ಳುವ ಗಾಡಿ, ಈರುಳ್ಳಿ ಶೇಖರಣಾ ಘಟಕ ಹಾಗೂ ಅರಿಶಿಣ ಸಂಸ್ಕರಣಾ ಘಟಕಗಳಿಗೆ ಸಹಾಯಧನ ಸೌಲಭ್ಯಕ್ಕಾಗಿ ಜಿಲ್ಲೆಯ ಆಸಕ್ತ ರೈತರು 2021ರ ಆಗಸ್ಟ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ಸಂಪರ್ಕಿಸಲು ಕೋರಲಾಗಿದೆ.