ಪತ್ರಕರ್ತ ವೆಂಕಟೇಶ ದೊರೆ ಕುಟುಂಬಕ್ಕೆ ೩ ಲಕ್ಷ ನೆರವು:ಕೆಜೆಯು ಕೃತಜ್ಞತೆ

0
30

ಸುರಪುರ: ಕಳೆದ ೨೦೨೦ರ ಸಪ್ಟೆಂಬರ್‌ನಲ್ಲಿ ಕೋವಿಡ್ ಸೊಂಕಿನಿಂದ ಮೃತಪಟ್ಟ ಕಕ್ಕೇರಾ ಪಟ್ಟಣದ ಪತ್ರಕರ್ತ ವೆಂಕಟೇಶ ದೊರೆ ಕುಟುಂಬಕ್ಕೆ ಸರಕಾರದಿಂದ ಮಂಜೂರಾದ ೩ ಲಕ್ಷ ರೂಪಾಯಿಗಳ ಸಹಾಯಧನದ ಚೆಕ್‌ನ್ನು ಶಾಸಕ ನರಸಿಂಹ ನಾಯಕ (ರಾಜುಗೌಡ) ವಿತರಿಸಿದರು.

ಶನಿವಾರ ಸಂಜೆ ನಗರದ ತಹಸೀಲ್ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ಸಂದರ್ಭದಲ್ಲಿ ವೆಂಕಟೇಶ ದೊರೆ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಶಾಸಕರು,ಈಗಾಗಲೇ ಇಬ್ಬರು ಪತ್ರಕರ್ತರಿಗೆ ತಲಾ ಮೂರು ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ನೀಡಲಾಗಿದೆ.ವೆಂಕಟೇಶ ದೊರೆಯವರಿಗೂ ಈ ಮೊದಲು ಮೂರು ಲಕ್ಷ ರೂಪಾಯಿಗಳ ಸಹಾಯಧನ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಣೆ ಮಾಡಿದ್ದರು.

Contact Your\'s Advertisement; 9902492681

ನೆರೆ ಪರಿಹಾರ ವಿತರಣೆಯಲ್ಲಿ ಅಕ್ರಮ ನಡೆದರೆ ೪೨೦ ಕೇಸ್ ಹಾಕಿಸಿ ಜೈಲಿಗೆ: ರಾಜುಗೌಡ

ಆದರೆ ನಂತರದಲ್ಲಿ ಕಕಾನಿಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರುವರು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ೫ ಲಕ್ಷ ಪರಿಹಾರಕ್ಕೆ ವಿನಂತಿಸಲಾಗಿದೆ ಎಂದು ಹೇಳಲಾಗಿದ್ದರಿಂದ ಚೆಕ್ ವಿತರಣೆಗೆ ಸ್ವಲ್ಪ ವಿಳಂಬವಾಗಿದೆ.ಆದರೆ ಈಗ ಈ ಮೊದಲು ಘೋಷಿಸಿದ ೩ ಲಕ್ಷ ರೂಪಾಯಿಗಳ ಚೆಕ್ ವಿತರಿಸಲಾಗುತ್ತಿದ್ದು,ಇನ್ನುಳಿದ ೨ ಲಕ್ಷ ರೂಪಾಯಿಗಳು ಮಂಜೂರಾಗಿದ್ದರ ಫೈಲ್ ತೆಗೆಯಿಸಿ ನಂತರ ಆ ೨ ಲಕ್ಷ ರೂಪಾಯಿಗಳನ್ನು ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ:ರಾಗಪ್ರಿಯ,ಜಿಲ್ಲಾ ಪಂಚಾಯತಿ ಸಿಇಒ ಶಿಲ್ಪಾ ಶರ್ಮಾ,ಎಸಿ ಪ್ರಶಾಂತ ಅನಗಂಡಿ,ಡಿವೈಎಸ್ಪಿ ವೆಂಕಟೇಶ ಉಗಿಬಂಡಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ತಾ.ಪಂ ಇಒ ಅಮರೇಶ ಇತರರಿದ್ದರು.

ಕೆಜೆಯು ಕೃತಜ್ಞತೆ: ಸುರಪುರ ಮತ್ತು ಹುಣಸಗಿ ತಾಲೂಕಿನ ಮೂರು ಜನ ಪತ್ರಕರ್ತರು ಕಳೆದ ಎರಡು ವರ್ಷಗಳಲ್ಲಿ ಮೃತ ಪಟ್ಟಿದ್ದರು.ಈ ಮೂರು ಜನರಿಗೆ ಸರಕಾರದಿಂದ ಪರಿಹಾರ ಕೊಡಿಸುವಂತೆ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ೨೦೨೦ರ ಸಪ್ಟೆಂಬರ್‌ನಲ್ಲಿ ಮನವಿ ಮಾಡಲಾಗಿತ್ತು.ಕೆಜೆಯು ಮನವಿಗೆ ಸ್ಪಂದಿಸಿದ್ದ ಶಾಸಕ ರಾಜುಗೌಡ ಅವರು ಎಲ್ಲಾ ಮೂರು ಜನರಿಗೂ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು,ಅಲ್ಲದೆ ತಾವೂ ವೈಯಕ್ತಿಕವಾಗಿ ೩ ಜನರಿಗೂ ತಲಾ ೫೦ ಸಾವಿರ ರೂಪಾಯಿಗಳ ಧನಸಹಾಯ ಮಾಡುವುದಾಗಿ ತಿಳಿಸಿ,ಎಲ್ಲ ಮೂರು ಜನರಿಗೂ ತಲಾ ೫೦ ಸಾವಿರ ನೀಡಿದ್ದರು.

ಆದ್ದರಿಂದ ಎಲ್ಲಾ ಮೂರು ಜನ ಪತ್ರಕರ್ತರಿಗೆ ಸರಕಾರದಿಂದ ಪರಿಹಾರ ಕೊಡಿಸಿದ ಹಾಗು ತಲಾ ೫೦ ಸಾವಿರ ರೂಪಾಯಿಗಳ ಸಹಾಯಧನ ನೀಡಿದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ್,ರಾಜ್ಯ ಉಪಾಧ್ಯಕ್ಷ ವೀರಣ್ಣ ಕಲಕೇರಿ,ರಾಜ್ಯ ಸಮಿತಿ ಸದಸ್ಯ ಪವನ ಕುಲಕರ್ಣಿ, ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ,ಹುಣಸಗಿ ತಾಲೂಕು ಅಧ್ಯಕ್ಷ ಬಾಪುಗೌಡ ಪಾಟೀಲ್,ಸುರಪುರ ತಾಲೂಕು ಕೆಜೆಯು ಪದಾಧಿಕಾರಿಗಳಾಧ ಮಲ್ಲು ಗುಳಗಿ,ಪರಶುರಾಮ ಮಲ್ಲಿಬಾವಿ,ಮಹಾದೇವಪ್ಪ ಬೊಮ್ಮನಹಳ್ಳಿ,ಮನಮೋಹನ ಪ್ರತಿಹಸ್ತ,ಮೌನೇಶ ಮಂಗಿಹಾಳ,ರವಿರಾಜ ಕಂದಳ್ಳಿ,ಮಲ್ಲಿಕಾರ್ಜುನ ತಳ್ಳಳ್ಳಿ,ರೇವಣಸಿದ್ದಯ್ಯ ಮಠ,ಗಿರೀಶ ಬ್ಯಾಕೊಡ,ದುರ್ಗಾಪ್ರಸಾದ, ಮಾಳಪ್ಪ ಕಿರದಹಳ್ಳಿ,ಮುರಳಿಧರ ಅಂಬುರೆ,ಶ್ರೀಮಂತ ಚಲುವಾದಿ,ಭೀಮು ಕರ್ನಾಳ,ರಾಘವೇಂದ್ರ ಮಾಸ್ತರ್,ಪುರುಷೋತ್ತಮ ದೇವತ್ಕಲ್,ಮದನಲಾಲ ಕಟ್ಟಿಮನಿ ಸೇರಿದಂತೆ ಸುರಪುರ ಹಾಗು ಹುಣಸಗಿ ತಾಲೂಕಿನ ಕೆಜೆಯುನ ಎಲ್ಲಾ ಪತ್ರಕರ್ತರು ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here