ದಿವ್ಯಾಂಗರಿಗೆ ಚಾಲನಾ ಅನುಜ್ಞಾಪತ್ರ‌ ನೋಂದಣಿ ಪತ್ರ ಪಡೆಯಲು ಮನವಿ

0
18

ಕಲಬುರಗಿ: ದಿವ್ಯಾಂಗರು ಸಹಾಯಕ ಸಾಧನಗಳಾದ ಅಟೋಮೆಟಿಕ್ ಗೇರ್ ಹೊಂದಿದ ಕಾರುಗಳನ್ನು ಯಾವುದೇ ಮಾರ್ಪಾಡು ಮಾಡದೇ ಸುಲಭವಾಗಿ ಚಾಲನೇ ಮಾಡಬಲ್ಲರು. ಇಂತಹ ವಿಶೇಷಚೇತನರಿಗೆ ಚಾಲನಾ ಅನುಜ್ಞಾಪತ್ರ‌ ಮತ್ತು ನೋಂದಣಿ ಪತ್ರ ಹಾಗೂ ಹಲವಾರು ವಿನಾಯಿತಿ/ಸೌಕರ್ಯ/ಪರಿಹಾರಗಳನ್ನು ರಾಜ್ಯ ಸರ್ಕಾರಗಳು ವಿಸ್ತರಿಸುವಂತೆ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಆದೇಶಿಸಿರುತ್ತದೆ ಎಂದು ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ತಿಳಿಸಿದ್ದಾರೆ.

ದಿವ್ಯಾಂಗರು ಖರೀದಿಸಿದ ವಾಹನಗಳ ನೋಂದಣಿ ಸಮಯದಲ್ಲಿ ಮಾಲೀಕತ್ವದ ವಿವರಗಳನ್ನು ಸೆರೆಹಿಡಿಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮೋಟಾರು ವಾಹನ ನಿಯಮಗಳು, 1989ರ ಫಾರ್ಮ್-20ರಲ್ಲಿ ತಿದ್ದುಪಡಿಗಾಗಿ ಅಧಿಸೂಚನೆಯನ್ನು ಕೂಡ ಹೊರಡಿಸಿದೆ.

Contact Your\'s Advertisement; 9902492681

ಇತ್ತಿಚೆಗೆ ಕರ್ನಾಟಕ ಸಾರಿಗೆ ಆಯುಕ್ತರು, ಬೆಂಗಳೂರು ಅವರು ರಾಜ್ಯದ ಎಲ್ಲಾ ಉಪ ಸಾರಿಗೆ ಆಯುಕ್ತರಿಗೆ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿಯಮಾನುಸಾರ ಕ್ರಮ ವಹಿಸಿ ಆಯಾ ಕಛೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸುವಂತೆ ಆದೇಶಿಸಿರುತ್ತಾರೆ.

ಎಲ್ಲಾ ವಿಶೇಷಚೇತನರು ಸಹಾಯಕ ಸಾಧನಗಳಾದ ಅಟೋಮೇಟಿಕ್ ಕಾರುಗಳನ್ನು ಖರೀದಿಸುವಾಗ ಎಲ್ಲರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here