ಪ್ರತ್ಯೇಕ ರಾಜ್ಯ ಘೋಷಣೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

0
120

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ಜೆ ಅನುಷ್ಠಾನಗೊಳಿಸುವಲ್ಲಿ ವಿಳಂಬ, ಮಂತ್ರಿಮಂಡಲದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಾಯಿ ಧೋರಣೆ, ಪ್ರದೇಶದ ಜನತೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿ ಇಂದು ನಗರದಲ್ಲಿ ಕಲ್ಯಾಣ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಸಿ ಘೋಷಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಪುಟದಲ್ಲಿ ಅನ್ಯಾಯ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371ಜೆ ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಂತ್ರಿಮಂಡಲದಲ್ಲಿ ಅನ್ಯಾಯ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಾಯಿ ಧೋರಣೆ ಅನ್ಯಾಯದ ಮೇಲೆ ಅನ್ಯಾಯ ಇದು ಈ ಪ್ರದೇಶದ ಜನತೆಗೆ ಮಾಡಿದ ಅವಮಾನ ಇದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಸಾಧ್ಯ ಎಂದರು.

Contact Your\'s Advertisement; 9902492681

ಈಗ ಹೋರಾಟ ಆರಂಭವಾಗಿದೆ ನಂಬರ್ 1 ನೇ ತಾರೀಖಿನಿಂದ ಕಲ್ಯಾಣ ಕರ್ನಾಟಕದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿ ತೆಲಂಗಣ ಮಾದರಿ ಹೋರಾಟ ಪ್ರಾರಂಭಿಸಲಾಗುವುದು ಎಂದು ನರಿಬೋಳ ನಾಲ್ಕು ಚಕ್ರ ಟ್ರಸ್ಟ್ ನ ಮಾಲಾಕಣ್ಣಿ ಹೇಳಿದರು.

ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಮೂಲೆ ಮೂಲೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗೆಬ್ಬಿಸಿ ತೆಲಂಗಾಣ ಮಾದರಿ ಪ್ರತ್ಯೇಕ ರಾಜ್ಯ ಮಾಡುವವರೆಗೂ ಚಳುವಳಿ ಮಾಡುತ್ತೇವೆ ಈ ಪ್ರದೇಶದ ಎಲ್ಲ ಶಾಸಕರು ಕೂಡಲೇ ರಾಜೀನಾಮೆ ನೀಡಿ ಪ್ರತ್ಯೇಕ ರಾಜ್ಯ ಹೋರಾಟದ ಹಾದಿ ಹಿಡಿಯಬೇಕು ಒತ್ತಾಯಿಸಿದರು.

ಶಾಸಕ ರಾಜುಗೌಡ, ಅಪ್ಪು ಗೌಡರವರೆ ಮಂತ್ರಿ ಸ್ಥಾನದ ಆಶೆ ಬಿಡಿ ಮುಖ್ಯಮಂತ್ರಿಯ ಕುರ್ಚಿಯತ್ತ ಗಮನಹರಿಸಿ ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವವಹಿಸಿ ತೆಲಂಗಾಣ ಮಾದರಿ ಪ್ರತ್ಯೇಕ ರಾಜ್ಯ ಮಾಡಿ ಕಲ್ಯಾಣ ಕರ್ನಾಟಕ ಆಗುತ್ತಿರುವ ಅನ್ಯಾಯ ಸರಿಪಡಿಸಿ ಮತ್ತೊಮ್ಮೆ ವಿಜಯನಗರ ಸಾಮ್ರಾಜ್ಯದ ಆಡಳಿತ ನೀಡುವತ್ತ ಗಮನಹರಿಸಬೇಕು ಎಂದು ಈ ವೇಳೆಯಲ್ಲಿ ಕರೆ ನೀಡಿದರು.

ಈ ಸಂದರ್ಭದಲ್ಲಿ ವಿನೋದ್ ಜನವರ, ಶರಣಗೌಡ ಪಾಟೀಲ ಹರಸೂರ್, ಮಾಲಾ ಎಸ್ಐ ಢಣ್ಣುರ, ತಾತ ಗೌಡ ಪಾಟೀಲ್, ಡಾ. ರಾಜಶೇಖರ್ ಬಂಡೆ, ಲಕ್ಷ್ಮಿಕಾಂತ್ ಸ್ವಾದಿ, ಅನಂತ ಗುಡಿ, ಮಾಂತೇಶ್ ಹರವಾಳ, ಹೃಷಿಕೇಶ್ ಬೆನಕನಹಳ್ಳಿ, ಮಹೇಶ್ ಫರತಬಾದ, ಜಗದೀಶ್ ರಾಮ ಸೇರಿದಂತೆ ಇನ್ನಿತರ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here