ಕಲಬುರಗಿ: ಜಿಲ್ಲೆಯಲ್ಲಿ ಹೆಚ್ಚುತಿರುವ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಲು ಕಲಬುರಗಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ನಗರದ ವಿವಿಧ ಠಾಣೆಯ ರೌಡಿ ಶೀಟರ್ ಗಳ ಪರೇಡ್ ತೆಗೆದುಕೊಂಡು, ಯಾವುದೇ ಅಪರಾಧ ಪ್ರಕರಣಗಳಲ್ಲಿ ಹೆಸರು ಕೇಳಿಬಂದರೆ ನೆಟ್ಟಿಗೆ ಇರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ರೌಡಿ ಶೀಟರ್ ಗಳ ಎರಡನೇ ಸುತ್ತಿನ ಪರೇಡ್ ಇದಾಗಿದೆ. ಈ ಸಂದರ್ಭದಲ್ಲಿ ವರಿಷ್ಠ ಅಧಿಕಾರಿಗಳು, ವಿವಿಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.