ಕಲಬುರಗಿ: ಗುಲಬರ್ಗಾ ವಿಶ್ವವಿದ್ಶಾಲಯದಲ್ಲಿ ಬೋದಕ ಮತ್ತು ಬೋದಕೇತರ ಹುದ್ದೆಗಳನ್ನು ನೇಮಕಗೊಳಿಸುವ ಕುರಿತು ಗುಲಬರ್ಗಾ ವಿಶ್ವವಿದ್ಶಾಲಯದ ಸ್ನಾತಕೊತ್ತರ ಅತಿಥಿ ಉಪನ್ಶಾಸಕರ ಸಂಘದ ವತಿಯಿಂದ ಕುಲಪತಿ ಪ್ರೊ.ಎಸ್.ಪಿ. ಮೇಲ್ಕೇರಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಶಕ್ಷ ಡಾ.ಅರುಣಕುಮಾರ ಕುರನೆˌ ಕಳೆದ 30 ವರ್ಷಗಳಿಂದ ಗುಲಬರ್ಗಾ ವಿಶ್ವವಿದ್ಶಾಲಯದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇದು ವಿವಿಯ ಕೆಲಸಕ್ಕೆ ಅಡಚಣಿಯಾಗುತ್ತಿದೆ.
ವಿಶ್ವವಿದ್ಶಾಲಯದ ಇತಿಹಾಸˌ ಕಾನೂನುˌ ಪತ್ರಿಕೋದ್ಶಮ ಸೇರಿದಂತೆ 38 ವಿಭಾಗಗಳಲ್ಲಿ ಬಹುತೇಕ ಬೋದಕ ಮತ್ತು ಬೋದಕೇತರ ಹುದ್ದೆಗಳು ಖಾಲಿ ಇವೆ. ಈಗಾಗಲೇ ದೇಶದ ಎಲ್ಲಾ ವಿವಿಗಳಲ್ಲಿ 6 ತಿಂಗಳೊಳಗಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಅನುದಾನ ಕಡಿತಗೊಳಿಸಲಾಗುವುದು ಎಂದು ಯುಜಿಸಿ ಸುತ್ತೋಲೆ ಹೊರಡಿಸಿದೆ. 371(ಜೆ) ಅಡಿಯಲ್ಲಿ ಬಳ್ಳಾರಿˌ ದಾವಣಗೆರೆˌ ಶಿವಮೊಗ್ಗ ಸೇರಿದಂತೆ ರಾಜ್ಶದ ವಿವಿಧ ವಿಶ್ವವಿದ್ಶಾಲಯಗಳಲ್ಲಿ ನೇಮಕಾತಿ ಪೂರ್ಣಗೊಂಡರೂ ಸಹ ಗುಲಬರ್ಗಾ ವಿಶ್ವವಿದ್ಶಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿಲ್ಲ. ನಾಲ್ಕು ಸಲ ಅಧಿಸೂಚನೆ ಹೊರಡಿಸಿದರೂ ಸಹ ನೇಮಕಾತಿ ವಿಳಂಭವಾಗುತ್ತಿದೆ ಎಂದರು. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಾ.ಅರುಣ ಕುರನೆ ಕುಲಪತಿಗಳ ಮೂಲಕ ರಾಜ್ಶಪಾಲರಿಗೆ ಮತ್ತು ಮುಖ್ಶಮಂತ್ರಿಗಳಿಗೆ ಆಗ್ರಹಿಸಿದರು.
ಈ ವೇಳೆ ಡಾ.ಪ್ರಕಾಶ ಬಡಿಗೇರˌ ಡಾ.ದೀಲಿಪ ನವಲೆˌ ಮಹಾಲಿಂಗ ಮಂಗಳೂರˌ ರಮೇಶ ಹೂವಿನಹಳ್ಳಿˌ ಶಂಭುಲಿಂಗ ನಡಿಗೇರಿˌ ಅಶೋಕ ಸಪಾಳೆˌ ರವಿಕುಮಾರ ಬಿಳವಾರˌ ಡಾ.ಅಶೋಕ ದೊಡ್ಮನಿ ಸೇರಿದಂತೆ ಇತರರು ಇದ್ದರು.