ಕಲಬುರಗಿ: ಕರ್ನಾಟಕ ರಾಜ್ಯ ಈಶಾನ್ಯ ಸಾರಿಗೆ ಸಂಸ್ಥೆಗೆ (ಡಿ ಟಿ ಓ) ರವೀಂದ್ರ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ದಲಿತ ಸೇನೆ ಜಿಲ್ಲಾ ಸಮಿತಿ ವಿದ್ಯಾರ್ಥಿ ಘಟಕ ಹಾಗೂ ಜಿಲ್ಲಾ ಪೌರ ಕಾರ್ಮಿಕ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪೌರ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮೇಲಿನಮನಿ, ಸೇನೆ ಜಿಲ್ಲಾ ಸಮಿತಿ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಶೀವಲಿಂಗ ದೊಡ್ಡಮನಿ, ತಾಲೂಕ ಅಧ್ಯಕ್ಷ ಕಪಿಲ್ ವಾಲಿ ಇದ್ದರು.