ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಪಿಂಜಾರ ನದಾಫ ಸಮುದಾಯದವರು ಸಭೆ ಸೇರಿ ಕರ್ನಾಟಕ ರಾಜ್ಯ ಪಿಂಜಾರ / ನದಾಫ್ ಹಿತರಕ್ಷಣಾ ಒಕ್ಕೂಟ ಎಂಬ ನೂತನ ರಾಜ್ಯ ಮಟ್ಟದ ಸಂಘ ಅಶ್ವಿತ್ಥಕ್ಕೆ ಬಂದಿದೆ.
ಈ ನೂತನ ಸಂಘಗಕ್ಕೆ ರಾಜ್ಯಾಧ್ಯಕ್ಷರಾಗಿ ಬಾವಸಾಬ ನದಾಫ್ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾಗಿ ಸೋಪಿಸಾಬ್ ಡಿ ಸುರಪುರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು.
ಈ ವೇಳೆ ರಾಜ್ಯಾಧ್ಯಕ್ಷ ಬಾವಾಸಾಬ ನದಾಫ್ ಪರಸನಹಳ್ಳಿ ಇವರು ಮಾತನಾಡಿ ಪಿಂಜಾರ ನದಾಫ ಸಮುದಾಯವು ಎಲ್ಲ ರಂಗಗಳಲ್ಲಿ ಅತ್ಯಂತ ಹಿಂದುಳಿದಿದೆ. ಸಮಾಜ ಬಾಂಧವರು ಎಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ ಒಗ್ಗಟ್ಟಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದರು.
ಸಭೆಯನ್ನುದ್ದೇಶಿಸಿ ನೂತನ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸೋಪಿಸಾಬ ಡಿ ಸುರಪುರ ಮಾತನಾಡಿದ ಪಿಂಜಾರ ನದಾಫ ಸಮುದಾಯವೂ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ನಮ್ಮ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ ಎಂದರು.
ಸಮುದಾಯದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಶೈಕ್ಷಣಿಕವಾಗಿ ಮುಂಚೂಣಿಗೆ ತರಲು ಶ್ರಮಿಸಬೇಕು ಎಂದು ಕಾರ್ಯಾಧ್ಯಕ್ಷ ಸೋಪಿಸಾಬ ಹೇಳಿದರು.
ನೂತನ ಸಂಘದ ಇನ್ನುಳಿದ ಪದಾಧಿಕಾರಿಗಳಾಗಿ ರಾಜ್ಯ ಉಪಾಧ್ಯಕ್ಷರು ದಾವಲಸಾಬ ಮೈಬೂಬಸಾಬ ಸಾ – ಕಲಬುರ್ಗಿ , ಪ್ರಧಾನ ಕಾರ್ಯದರ್ಶಿ ಕಾಸಿಂಸಾಬ ನದಾಫ ಬೇವಿನಾಳ, ಸಹ ಕಾರ್ಯದರ್ಶಿ ಕಾಸಿಮಅಲಿ ನಡಿಗೇರಿ ಸಾ!!ಸಗರ, ರಾಜ್ಯ ಪ್ರಧಾನಸಂಚಾಲಕರಾಗಿ
ನಬಿರಸೂಲ ನದಾಫ ಸಾ- ಏವೂರ ,ರಾಜ್ಯ ಸಂಚಾಲಕ
ಹುಸೇನಸಾಬ ಎಂ ಗಾದಿ ಸಾ- ಹುಣಸಗಿ ಹಾಗೂ ರಾಜ್ಯ ಖಜಾಂಚಿ ಬಂದೇನವಾಜ ಸಾ – ಕರಡಕಲ ಇವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜು ಬಿ ನದಾಫ ಹಾಗೂ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಪಿಂಜಾರ್ ನದಾಫ್ ಸಮಾಜದ ಗಣ್ಯರು, ಯುವಕರು ಉಪಸ್ಥಿತರಿದ್ದರು.