ಶಹಾಬಾದ : ತಾಲೂಕಿನ ಹೊನಗುಂಟಾ ಗ್ರಾಪಂಯಲ್ಲಿ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದಿಂದ ಹಾಗೂ ಜಂಟಿ ಸಂಘಟನೆ ವತಿಯಿಂದ ೧೪ನೇ ಹಣಕಾಸಿನಲ್ಲಿ ವಿಕಲಚೇತನರ ಸೌಲಭ್ಯಕ್ಕಾಗಿ ಹೊಲಿಗೆ ಯಂತ್ರ ಹಾಗೂ ಆಹಾರದ ಕಿಟ್ ವಿತರಣೆ ಮಾಡಬೇಕೆಂದು ಆಗ್ರಹಿಸಿ ಶುಕ್ರವಾರ ಗ್ರಾಮ ಪಂಚಾಯತಿ ಎದುರು ಅನಿರ್ದಿ?ವಧಿ ಧರಣಿ ಸತ್ಯಾಗ್ರಹಕ್ಕೆ ಮಣಿದ ಗ್ರಾಪಂ ಅಧಿಕಾರಿಗಳು ೨೬ ಹೊಲಿಗೆ ಯಂತ್ರ ಅಂಗವಿಕಲರಿಗೆ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ, ಅಂಗವಿಕಲರಿಗೆ ಹೊಲಿಗೆ ಯಂತ್ರ ಹಾಗೂ ಕಿಟ್ ವಿತರಿಸುವಂತೆ ಧರಣಿ ನಡೆಸಲಾಗಿತ್ತು. ಧರಣಿಗೆ ಮಣಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾವೇರಿ ಗೋವಿಂದ ಸ್ಥಳದಲ್ಲಿಯೇ ೨೬ ಹೊಲಿಗೆ ಯಂತ್ರ ಅಂಗವಿಕಲರಿಗೆ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಆಹಾರ ಕಿಟ್ ಬಗ್ಗೆ ಕೇಳಿದಾಗ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.ಅಲ್ಲದೇ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡು, ಅಂಗವಿಕಲರ ಆಹಾರ ಕಿಟ್ ಖಂಡಿತವಾಗಿ ನೀಡುವ ಭರವಸೆ ನೀಡಿದ್ದಾರೆ. ಅವರ ಭರವಸೆಗೆ ನಾವು ಧರಣಿ ಹಿಂದಕ್ಕೆ ತೆಗೆದುಕೊಳ್ಳುತ್ತೆವೆ.ಒಂದು ಆಹಾರ ಕಿಟ್ ನೀಡಲು ವಿಳಂ ನೀತಿ ಅನುಸರಿಸಿದರೇ ಮತ್ತೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ದಲಿತ ವಿದ್ಯಾರ್ಥಿಗಳ ಒಕ್ಕೂಟ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರಿ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕರಾದ ರಾಯಪ್ಪ ಹುರಮುಂಜಿ, ಕರವೇ ಅಧ್ಯಕ್ಷ ವಿಶ್ವರಾಜ ಫಿರೋಜಾಬಾದ, ಗ್ರಾಮಪಂಚಾಯತಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ, ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಶರಣು ಬನ್ನೇರ್, ಕುರುಬ ಸಂಘದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.