ಹಲ್ಲುಗಳ ನಿರ್ವಹಣೆ ಮಾಡಿದರೆ ದಂತ ರೋಗಗಳನ್ನು ತಡೆಗಟ್ಟಲು ಸಾಧ್ಯ: ರಮಾದೇವಿ ಕಲ್ಲಾ

0
53

ಶಹಾಬಾದ :ಹಲ್ಲುಗಳು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೇ ದಂತ ಸಂಬಂಧಿತ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ನಂದೂರ ಗ್ರಾಪಂ ಉಪಾಧ್ಯಕ್ಷೆ ರಮಾದೇವಿ ನಾಗರಾಜ ಕಲ್ಲಾ ಹೇಳಿದರು.
ಅವರು ಬಿಎಫ್‌ಐಎಲ್ ಅಪೋಲೋ ಟೆಲಿ ಹೆಲ್ತ್, ನಂದೂರ ಆರೋಗ್ಯ ಕೇಂದ್ರ, ಗ್ರಾಪಂ ನಂದೂರ ಹಾಗೂ ಮೈರಾಡ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಉಚಿತ ದಂತ ಚಿಕಿತ್ಸಾ ಶಿಬಿರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಸಾಮಾನ್ಯರಲ್ಲಿ ಹಲ್ಲಿನ ಕುರಿತು ಜಾಗೃತಿ ಹಾಗೂ ಕಾಳಜಿ ಹೆಚ್ಚಿಸುವ ಇಂತಹ ಶಿಬಿರಗಳು ಸಹಕಾರಿಯಾಗಿವೆ.ಆದ್ದರಿಂದ ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಎಲ್ಲಾ ಗ್ರಾಮಸ್ಥರು ಚಿಕಿತ್ಸೆ ಪಡೆಯಬೇಕೆಂದು ಹೇಳಿದರು.

Contact Your\'s Advertisement; 9902492681

ಡಾ.ಮೇಘನಾ ಮಾತನಾಡಿ, ಹಲ್ಲಿನ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು.ಹಲ್ಲಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ.ಹಳ್ಳಿ ಪ್ರದೇಶದಲ್ಲಿ ಉಚತ ಶಿಬಿರ ಹಮ್ಮಿಕೊಂಡು ವೈದ್ಯರಾದ ನಾವು ಸೇವೆ ಸಲ್ಲಿಸಲು ಬಂದಿರುವುದರಿಂದ ಈ ಶಿಬಿರದಲ್ಲಿ ಪ್ರತಿಯೊಬ್ಬರೂ ದಂತ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

ಪ್ರತಿಯೊಬ್ಬರು ಪ್ರತ್ಯೇಕ ಬ್ರ?ನಲ್ಲಿ ಹಲ್ಲು ಉಜ್ಜುವು ಅಭ್ಯಾಸ ಇಟ್ಟಿಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಡಾ.ಅಮರ್ಜಾ ಮಾತನಾಡಿ, ಈಗಿನ ಜೀವನ ಶೈಲಿ ಬದಲಾವಣೆಯಿಂದ ಮಕ್ಕಳು ಸಿಹಿತಿನಿಸುಗಳು, ಬೇಕರಿ ತಿನಿಸು ಮುಂತಾದ ಜಂಕ್ ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಬೇಗ ಹಲ್ಲುಗಳು ಹಾಳಾಗುತ್ತಿವೆ. ಆದ್ದರಿಂದ ಈ ಶಿಬಿರದ ಮೂಲಕ ಹಲ್ಲಿನ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ.

ಗೋಪಾಲ ರಾಠೋಡ, ಗೀತಾ ರಾಠೊಡ, ನಾಗರಾಜ ಕಲ್ಲಾ, ಗ್ರಾಮ ಪಂಚಾಯತ ಸದಸ್ಯರಾದ ಶಿವಕುಮಾರ ಅಂಬಲಗಿ, ಸರುಬಾಯಿ ಪಾಣೇಗಾಂವ. ಜಗನ್ನಾಥ ಹರಳಯ್ಯ, ಶಿವಾಜಿ ರಾಠೋಡ, ಪಿಡಿಓ ಮಾಹಾಂತೇಶ ತಳವಾರ, ಶರಣು ಮೈರಾಡ, ಶಿವಶರಣ ಬೋಳಿ, ಸಂತೋ?, ವಿಜಯಕುಮಾರ ಕೋರೆ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here