ಬಿಜೆಪಿ ಕಚೇರಿಯಲ್ಲಿ 7ನೇ ” ರಾಷ್ಟ್ರೀಯ ನೇಕಾರ ದಿನಾಚರಣೆ

0
42

ಕಲಬುರಗಿ: ಇಂದು ಬಿಜೆಪಿ ಕಾರ್ಯಾಲಯದಲ್ಲಿ 7ನೇ ” ರಾಷ್ಟ್ರೀಯ ನೇಕಾರ ದಿನಾಚರಣೆ, ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿಯ ಮಹಾನಗರ ಪಾಲಿಕೆಯ ಮಾಜಿ ಸದ್ಯಸ, ನೇಕಾರ ಹಿರಿಯ ಮುಖಂಡರಾದ ರೇವಣ್ಣಸಿದ್ದ ಗಡ್ಡದ ಅವರು ನೇಕಾರರ ಧರ್ಮ ಗುರು ಶ್ರೀ ದಾಸಿಮಯ್ಯನ ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಿಜೆಪಿಯ ಯುವ ಮುಖಂಡ ಹಾಗೂ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ ಕೋಗನೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಕೈಮಗ್ಗ ನೇಕರರನ್ನು ಉಳಿಸಿ, ಬೆಳೆಸಲು 2015 ರಲ್ಲಿ “ರಾಷ್ಟ್ರೀಯ ನೇಕಾರ ದಿನ” ದ ಘೋಷಣೆ ಮದ್ರಾಸ್ ನಲ್ಲಿ ಕೈಗೊಂಡು ಮಾದರಿ ಹೆಜ್ಜೆ ಹಾಕಿದರು. ಇಂದು 7ನೇ ವರ್ಷದ ಆಚರಣೆ ಮಾಡಲು ನನಗೆ ಅವಕಾಶ ಒದಗಿಬಂದಿದ್ದು ಸೌಭಾಗ್ಯವೇ ಸರಿ! ನಾನು ಕೂಡಾ ನೇಕಾರ ಪ್ರಕೋಷ್ಠದ ಎಲ್ಲಾ ಸದ್ಯಸರಿಗೆ ಶುಭ ಕೋರುತ್ತಾ, ರೈತ ಮತ್ತು ನೇಕಾರ ನಮ್ಮ ಪಕ್ಷದ ಎರಡು ಕಣ್ಣುಗಳು ಇದ್ದತೆ, ಸಮಾನ ಅವಕಾಶ ನೀಡಲು ನಮ್ಮ ಪಕ್ಷದ ರಾಜ್ಯ ಮುಖಂಡರ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೆನೆ ಎಂದು ತಿಳಿಸಿದರು.

ನೇಕಾರ ಪ್ರಕೋಷ್ಠದ ಸಹ ಸಂಚಾಲಕ ಜೇನವೆರಿ ವಿನೋದ ಕುಮಾರ ಎಲ್ಲರನ್ನು ಸ್ವಾಗತಿಸಿದರು, ಪ್ರಸ್ತಾವನೆಯನ್ನು ಪ್ರಕೋಷ್ಠದ ಸಂಚಾಲಕರಾದ ಶಿವಲಿಂಗಪ್ಪಾ ಅಷ್ಟಗಿ ಯವರು ನಿರ್ಣಯಗಳನ್ನು ಮಂಡಿಸಿದರು.

ರೈತ ಸಾವಿಗೀಡಾದ ನಂತರ 5 ಲಕ್ಷ ಪರಿಹಾರ ನೀಡುವಂತೆ ನೇಕಾರ ನಿಧನ ಹೊಂದಿದರು 5 ಲಕ್ಷ ನೀಡಲು ಮಾನ್ಯ ಮುಖ್ಯ ಮಂತ್ರಿಗಳು ಅದೇಶಿಸಬೇಕು, ನೇಕಾರ ನಿಗಮ ಸ್ಥಾಪಿಸಬೇಕು, ರಾಷ್ಟ್ರ ಮಟ್ಟದಲ್ಲಿ ಹಿಂದುಳಿದ ಆಯೋಗ ಮತ್ತು ಅಲ್ಪಸಂಖ್ಯಾತರ ಆಯೋಗ ದಂತೆ ರಾಷ್ಟ್ರೀಯ ನೇಕಾರ ಆಯೋಗ ಸ್ಥಾಪನೆ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುರಹಿನ ಶೆಟ್ಟಿ ಸಮಾಜದ ಖಜಾಂಚಿ ಕುಶಾಲ್ ಯಾಡವಳ್ಳಿ, ಮೇಘರಾಜ ಕುಲಕರ್ಣಿ, ಸಿದ್ದಾರ್ಥ, ಶರಣ ಪ್ರಸಾದ ಜೇನವೆರಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here