ಚಿತ್ತಾಪುರ:ತಾಲೂಕಿನ ನಾಲವಾರದ ಶ್ರೀ ಕೊರಿಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಪ್ರೊ.ಬಿ.ಸಿ.ನಾಗೇಶ ಅವರು ಭೇಟಿ ನೀಡಿ ಮಠದ ಪೀಠಾಧಿಪತಿಗಳಾದ ಡಾ.ಸಿದ್ದ ತೋಟೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
ಸಚಿವರಾಗಿ ಮೊದಲ ಬಾರಿಗೆ ಶ್ರೀ ಮಠಕ್ಕೆ ಭೇಟಿ ಮಾಡಿದ ಸಚಿವರು ಕೋರಿಸಿದ್ದನ ಗದ್ದುಗೆಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ದೇವರ ದರ್ಶನ ಪಡೆದರು.ನಂತರ ಮಠದ ಪೀಠಾಧಿಪತಿ ಅವರ ಪಾದದಡಿ ಕುಳಿತು ಪುನಿತರಾದರು.
ನೂತನ ಸಚಿವರಿಗೆ ಶ್ರೀ ಮಠದ ಪೂಜ್ಯರಾದ ಡಾ.ಸಿದ್ದ ತೋಟೇಂದ್ರ ಸ್ವಾಮೀಜಿಗಳು ಶಾಲು ಸನ್ಮಾನ ಮಾಡಿ ಮಾತನಾಡಿದರು ರಾಜ್ಯದಲ್ಲಿ ಹಬ್ಬುತ್ತಿರುವ ಕೋವಿಡ್-19 ಸೋಂಕಿನ ಅಲೆಗಳ ಮಧ್ಯ ಜನಗಳ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.ವರ್ಷದಿಂದ ಶಾಲಾ ಕಾಲೇಜುಗಳು ತೆರೆಯದ ಕಾರಣ ಮಕ್ಕಳ ಶೈಕ್ಷಣಿಕಮಟ್ಟ ಕುಂಠಿತವಾಗುತ್ತಿದೆ.
ವಿದ್ಯಾರ್ಥಿಗಳ ಜೀವನ ಆತಂಕದಲ್ಲಿದೆ,ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಆಡಳಿತ ನೀಡಲು ಸಿಕ್ಕಿರುವ ಅಧಿಕಾರದ ಅವಕಾಶವನ್ನು ಸದುಪಯೋಗ ಪಡೆದುಕೊಂಡು ನಾಡಿನ ಜನರ ಮತ್ತು ಮಕ್ಕಳ ಆರೋಗ್ಯ ಕಾಪಾಡಿ ಜೊತೆಗೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ,ಯಾದಗಿರಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ,ಜಿಲ್ಲಾ ಕಾರ್ಯದರ್ಶಿ ಗುರು ಕಾಮಾ,ಮುಖಂಡರಾದ ಮಹೇಶ ವೀರಯ್ಯಸ್ವಾಮಿ ಚಿಂಚೋಳಿ, ಶ್ರೀ ಮಠದ ವಕ್ತಾರ ಮಹದೇವ ಗವ್ಹಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.