ಶಹಾಬಾದ: ನಗರದ ವಾರ್ಡ ನಂ.೧೭ರ ವ್ಯಾಪ್ತಿಯ ಸಾರ್ವಜನಿಕರಿಗೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಮಾತನಾಡಿ, ೧೮ ವ? ಮೇಲ್ಪಟ್ಟವರಿಗೆ ವಾರ್ಡ ನಂ. ೧೭ ರ ನಗರಸಭೆ ಸದಸ್ಯೆ ಸಾಬೇರಾ ಬೇಗಂ ಅವರ ಸಹಕಾರದೊಂದಿಗೆ ಒಂದು ದಿನದ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ಬಂದು ಲಸಿಕೆ ಪಡೆಯಬಹುದು. ಲಸಿಕೆ ಪಡೆಯುವವರು ಸಾಮಾಜಿಕ ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅದರಲ್ಲೂ ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಸದಸ್ಯೆ ಸಾಬೇರಾ ಬೇಗಂ ಮಾತನಾಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಬರೋದಿಲ್ಲ ಎಂದು ಅನಾವಶ್ಯಕವಾಗಿ ತಿರುಗಾಡಬೇಡಿ.ಮೊದಲು ಮೊದಲನೇ ಹಾಗೂ ಎರಡನೇ ಲಸಿಕೆಯನ್ನು ಪಡೆದುಕೊಳ್ಳುವವರು ಮುಂದೆ ಬನ್ನಿ. ಕೊರೊನಾ ಹೋಗಲಾಡಿಸಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ.ಯಾವುದೇ ರೀತಿ ಅಸಡ್ಡೆ ತೋರದಿರಿ ಎಂದು ಮನವಿ ಮಾಡಿದರು.
ಈ ಲಸಿಕಾ ಅಭಿಯಾನ ನಡೆಸಿ ಸುಮಾರು ೮೫ ಜನರಿಗೆ ಲಸಿಕೆ ನೀಡಲಾಯಿತು. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಯುಸೂಫ ನಾಕೇದಾರ, ವಾಣೀಶ್ರೀ, ಜಯಶ್ರೀ,ಆಶಾ. ಈರಮ್ಮ, ರೇಣುಕಾ,ಅನರ್ಜಾ ಇದ್ದರು.