ಅತಿವೃಷ್ಠಿ ಬೆಳೆ ಹಾನಿ, ಜಂಟಿ ಸಮೀಕ್ಷೆಗೆ ಸಂಸದ ಸೂಚನೆ

0
25

ಕಲಬುರಗಿ: ಕಳೆದ ಜುಲೈ ಮಾಹೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹಾನಿಯಾದ ಬೆಳೆಗಳ ಕುರಿತು ಕೂಡಲೆ‌ ಜಂಟಿ ಸರ್ವೆ ನಡೆಸಿ ರೈತರಿಗೆ ಪರಿಹಾರ ನೀಡಬೇಕೆಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರವಿವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಬೆಳೆ ವಿಮಾ‌ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ‌ ಮಾತನಾಡಿದರು.

Contact Your\'s Advertisement; 9902492681

ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಜಂಟಿಯಾಗಿ ಸಮೀಕ್ಷೆ ನಡೆಸಿ ಬೆಳೆ ಹಾನಿಯಾದ ರೈತರಿಗೆ ತ್ವರಿತಗತಿಯಲ್ಲಿ ಸ್ಥಳೀಯ ವಿಪತ್ತು ಪರಿಹಾರದಡಿ ವಿಮಾ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಸಂಸದೆಉ ತಿಳಿಸಿದರು.

ಸಭೆಯಲ್ಲಿದ್ದ ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರು ಮಾತನಾಡಿ ಜುಲೈ ಮಾಹೆಯಲ್ಲಿ ಸುರಿದ ಅಧಿಕ ಮಳೆಯಿಂದ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 27,404 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಇದರಲ್ಲಿ 15,502 ಹೆಕ್ಟೇರ್ ತೊಗರಿ, 2,768 ಹೆಕ್ಟೇರ್ ಉದ್ದು, 7,664 ಹೆಕ್ಟೇರ್ ಹೆಸರು, 1,345 ಹೆಕ್ಟೇರ್ ಹತ್ತೀ, 103 ಹೆಕ್ಟೇರ್ ಸೋಯಾಬಿನ್, 22 ಹೆಕ್ಟೇರ್ ಸೂರ್ಯಕಾಂತಿ ಬೆಳೆ ಸೇರಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಯಡಿ 77619 ರೈತರು ನೋಂದಣಿ‌ ಮಾಡಿಕೊಂಡಿದ್ದು, ಅವರೆಲ್ಲರಿಗೂ ಪರಿಹಾರ ಒದಗಿಸಲು ವಿಮಾ ಸಂಸ್ಥೆಗೆ ಇಲಾಖೆಯಿಂದ ಅಗತ್ಯ ಮಾಹಿತಿ ನೀಡುವ ಕಾರ್ಯ ನಡೆದಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಶಶಿ, ಕೃಷಿ‌ ಮತ್ತು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು, ಯೂನಿವರ್ಸಲ್ ಸೋಂಪೋ ವಿಮಾ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here