ಆ ೧೫ ಸ್ವತಂತ್ರ ದಿನಾಚರಣೆ ಸರಳವಾಗಿ ಆಚರಣೆಗೆ ನಿರ್ಧಾರ: ಶ್ರೀನಿವಾಸ ಕುಲಕರ್ಣಿ

0
12

ಆಳಂದ: ಆ ೧೫ ೭೫ನೇ ಸ್ವತಂತ್ರ ದಿನಾಚರಣೆಯನ್ನು ಕೋವಿಡ-೧೯ರ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ತಮ್ಮ ತಮ್ಮ ಕಚೇರಿ ಹಂತಗಳಲ್ಲಿ ಆಚರಿಸಲು ಗ್ರೇಡ-೨ ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ ಅವರು ಸೂಚಿಸಿದರು.

ಶುಕ್ರವಾರ ಪಟ್ಟಣದ ತಹಶೀಲ ಕಚೇರಿಯಲ್ಲಿ ಸ್ವತಂತ್ರ ದಿನಾಚರಣೆ ಆಚರಣೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ  ಮಾತನಾಡಿದ ಅವರು ಅಂದು ಬೆಳಗ್ಗೆ ೭ ಗಂಟೆಗೆ ತಮ್ಮ ತಮ್ಮ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ನೇರವೇರಿಸಿ ೮ ಗಂಟೆಗೆ ಎಲ್ಲಾ ಅಧಿಕಾರಿಗಳು ತಹಶೀಲ ಕಚೇರಿಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಶ್ರೀ ರಾಮ ಮಾರ್ಕೇಟ ಆವರಣದಲ್ಲಿ ನಡೆಯುವ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಪ್ಪದೇ ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಮತ್ತು ಯಾವುದೇ ತರಹದ ಸಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ ಎಂದು ತಿಳಿಸಿದರು.

Contact Your\'s Advertisement; 9902492681

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬೇಬಿನಂದಾ, ಅರಣ್ಯ ಇಲಾಖೆಯ ವೀರೇಂದ್ರ, ಕೈಗಾರಿಕ ಅಧಿಕಾರಿ ಜಾಫರ ಖಾಸಿಂ ಅನ್ಸಾರಿ, ಆರೋಗ್ಯ ಇಲಾಖೆಯ ವಿಜಯಲಕ್ಷ್ಮೀ, ಲೋಕೋಪಯೋಗಿಯ ಇಲಾಖೆಯ ಶಿವಯ್ಯ ಗಣಾಚಾರಿ ಹಾಗೂ ಬಸವರಾಜ ಕಾಬಾ, ಆಕಾಶ ಸಜ್ಜನ, ಆನಂದ ಪೂಜಾರಿ ಸಭೆಯಲ್ಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತ ಇದ್ದರೇ ತಾಲ್ಲೂಕಿನ ಒಟ್ಟು ೨೮ ಇಲಾಖೆಗಳು ಇದ್ದು ಇದರಲ್ಲಿ ಅರ್ಧ ಭಾಗದಷ್ಟು ಅಧಿಕಾರಿಗಳು ಸಭೆಗೆ ಗೈರು ಆಗಿದ್ದು ಎದ್ದು ಕಾಣುತ್ತಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here