ಕಲಬುರಗಿ: ಮನುಷ್ಯ-ಮನುಷ್ಯರ ನಡುವೆ ಇಂದು ಪ್ರೀತಿ, ವಿಶ್ವಾಸ, ಅನುಕಂಪ, ಕರುಣೆ, ಸಂಬಂಧಗಳು, ಮಾನವೀಯತೆ ಮರೆಯಾಗುತ್ತಿರುವುದಕ್ಕೆ ನಮ್ಮಲ್ಲಿನ ಸ್ವಾರ್ಥಭಾವನೆಯೇ ಕಾರಣವಾಗಿದೆ. ಹಾಗಾಗಿ, ಇಂಥ ಕಾರ್ಯಕ್ರಮಗಳಿಂದ, ಮರೆಯಾಗುತ್ತಿರುವ ಮನುಷ್ಯತ್ವ, ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸಬಹುದು ಎಂದು ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು ನುಡಿದರು.
ವಿಶ್ವ ಮಾನವ ಹಕ್ಕುಗಳ ಸಂರಕ್ಷಣೆ ಆಯೋಗದಿಂದ ಸಾಹಿತ್ಯ ಪ್ರೇರಕ ಡಾ.ಶರಣರಾಜ್ ಛಪ್ಪರಬಂದಿ ಅವರಿಗೆ ಕೊಡಮಾಡಿದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಹಿನ್ನೆಲೆ ಕ್ರಿಯಾಶೀಲ ಗೆಳೆಯರ ಬಳಗವು ನಗರದ ಕಲಾ ಮಂಡಳದಲ್ಲಿ ಸೋಮವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಕರೊನಾ ಯೋಧರಿಗೆ ಗೌರವ ಸಮ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ನಾವು ನಿಸ್ವಾರ್ಥ ಭಾವನೆಯಿಂದ ಮಾಡಿದ ಕಾಯಕದಿಂದ ಮನಸ್ಸಿಗೆ ಶಾಂತಿ, ತೃಪ್ತಿ, ಸಮಾಧಾನ ಪಡೆಯಬಹುದು. ಫಲಾಪೇಕ್ಷೆ ಇಲ್ಲದೆ ಮಾಡುವ ಪ್ರತಿಯೊಂದು ಸಾಮಾಜಿಕ ಕಾರ್ಯವು ದೇವರ ಸೇವೆಗೆ ಸಮನಾಗಿರುತ್ತದೆ. ನಮ್ಮ ಸಮಾಜ ಸೇವೆ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಮೂಡುವಂತಾಗಬೇಕು ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅಧ್ಯಕ್ಷತೆ ವಹಿಸಿದ್ದರು. ತಹಾಸೀಲ್ದಾರ್ ಅಂಜುಮ್ ತಬಸ್ಸುಮ್, ಸಂಶೋಧಕ ಮುಡುಬಿ ಗುಂಡೇರಾವ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಕಂಟೆಪ್ಪ ಬಾವಗಿ, ಸಹಾಯಕ ಇಂಜಿನೀಯರ್ ಕಾಳಪ್ಪಾ, ಉದ್ಯಮಿ ಗಗನ ಗಿಲ್ಡಾ, ಆಶ್ವಿ ನಿ ಶರಣರಾಜ್ ಛಪ್ಪರಬಂದಿ, ಸುವರ್ಣಾ ಛಪ್ಪರಬಂದಿ, ಭುವನೇಶ್ವರಿ ಸಂತೋಷ ಜಾನೆ, ಬಿಜೆಪಿ ಮುಖಂಡ ರಾಜುಗೌಡ ನಾಗನಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಕ್ರಿಯಾಶೀಲ ಗೆಳೆಯರ ಬಳಗದ ಶಕುಂತಲಾ ಪಾಟೀಲ ಜಾವಳಿ, ಪ್ರಭುಲಿಂಗ ಮೂಲಗೆ, ಶರಣಬಸವ ಜಂಗಿನಮಠ, ಪ್ರಭವ ಪಟ್ಟಣಕರ್, ಶಿವಾನಂದ ಮಠಪತಿ, ರವಿಕುಮಾರ ಶಹಾಪುರಕರ್, ಜಗದೀಶ ಮರಪಳ್ಳಿ, ಶರಣಬಸಪ್ಪ ನರೂಣಿ, ಮಾಲಾ ದಣ್ಣೂರ, ಮಾಲಾ ಕಣ್ಣಿ, ಗುರುಶಾಂತ ಓಗಿ, ಪ್ರಮುಖರಾದ ಸುನೀಲ ಪಾಟೀಲ ಸರಡಗಿ, ಶಿವರಾಜ್ ಇಂಗಿನಶೆಟ್ಟಿ, ಕೇದಾರ ಬಸೂದೆ, ಸೋಮಶೇಖರ ನಂದಿಧ್ವಜ, ಮಹಾದೇವ ಅಟ್ಟೂರ, ಬಸವರಾಜ ಛಪ್ಪರಬಂದಿ, ಡಾ.ರಾಜಶೇಖರ ಛಪ್ಪರಬಂದಿ, ಡಾ.ಗುರುರಾಜ್ ಛಪ್ಪರಬಂದಿ, ಪ್ರಸನ್ನ ವಾಂಜರಖೇಡೆ, ಚಂದ್ರಕಾಂತ ಕಾಳಗಿ, ಸೈಯದ್ ಹಾಜೀಪೀರಂ, ಕಮಲಾಕರ್ ಆನೇಗುಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರೊನ ಯೋಧರಾದ ಶಿವಾನಂದ ಹೊನಗುಂಟಿ, ಈಶ್ವರ ಪನಶೆಟ್ಟಿ, ಕಲ್ಯಾಣರಾವ ಪಾಟೀಲ, ದಯಾನಂದ ಪಾಟೀಲ, ಸಂತೋಷ ಕುಡ್ಡಳ್ಳಿ, ಸುಶಾಂತ ದೇಶಮುಖ, ಸುಕನ್ಯಾ ವಿ.ಕೆ., ಶ್ರೀಗಿರಿ ನನ್ನೂರೆ, ವಿನೋದ ಕುಲಕರ್ಣಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.