ಹೊಟ್ಟೆಗೆ ರೈತ ಬೆಳೆದ ಅನ್ನ ತಿನ್ನುವುದಾದರೆ ಮೂರು ಕಾಯಿದೆಗಳ ರದ್ದುಗೊಳಿಸಿ: ಅಯ್ಯಣ್ಣ ಹಾಲಬಾವಿ

0
7

ಸುರಪುರ: ಇಂದು ದೇಶದಲ್ಲಿನ ರೈತರ ಮರಣ ಶಾಸನ ಬರೆಯುವ ರೀತಿಯಲ್ಲಿ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ.ಇದರಿಂದ ರೈತರು ಸಂಕಷ್ಟಪಡಲಿದ್ದಾರೆ.ಹೊಟ್ಟೆಗೆ ರೈತರು ಬೆಳೆದ ಅನ್ನ ತಿನ್ನುವುದಾದರೆ ಮೂರು ಕಾಯ್ದೆಗಳನ್ನು ರದ್ದುಗೊಳಿಸಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ,ದೇಶದಲ್ಲಿನ ರೈತರು ಇಂದು ನಿತ್ಯ ಸಾವಿಗೀಡಾಗುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಭೂ ಸುಧಾರಣಾ ಕಾಯಿದೆ,ಎಪಿಎಂಸಿ ಕಾಯಿದೆ ಮತ್ತು ವಿದ್ಯುತ್ ಕಾಯಿದೆಗಳನ್ನು ಜಾರಿಗೆ ತರಲು ಹೊರಟಿರುವ ಸರಕಾರಗಳು ರೈತರಿಗೆ ಮರಣ ಶಾಸನ ಬರೆಯಲು ನಿಂತಿವೆ.

Contact Your\'s Advertisement; 9902492681

ಒಂದು ಸಣ್ಣ ವಸ್ತು ತಯಾರಾದರೆ ಅದಕ್ಕೆ ಬೆಲೆಯನ್ನು ನಿಗದಿ ಮಾಡುವ ಅಧಿಕಾರ ಅದನ್ನು ತಾಯಾರಿಸುವವರಿಗಿದೆ,ಆದರೆ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ನಿಗದಿ ಮಾಡುವ ಅವಕಾಶವಿಲ್ಲ ಎಂದಾಗ ರೈತ ಉಳಿಯಲು ಹೇಗೆ ಸಾಧ್ಯ.ಆದ್ದರಿಂದ ಕೂಡಲೇ ಮೂರು ಕಾಯಿದೆಗಳನ್ನು ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ನಾವೆಲ್ಲರು ನಿರಂತರ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ನಂತರ ಅಂಬ್ರೇಶ ಸಾಹುಕಾರ ಹಯ್ಯಾಳ,ಹನುಮಗೌಡ ಮದಲಿಂಗನಾಳ,ಹಣಮಂತ್ರಾಯ ಮಡಿವಾಳ ಮಾತನಾಡಿ,ವಿದ್ಯುತ್ ಖಾಸಗೀಕರಣ ಕೈಬಿಡಬೇಕು,ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ರದ್ದುಗೊಳಿಸಬೇಕು,ಎಪಿಎಮ್‌ಸಿ ಕಾಯ್ದೆ ತಿದ್ದುಪಡಿಯನ್ನು ನಿಲ್ಲಿಸಬೇಕು,ರೈತರ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಹಾಗು ರೈತರ ಜಮೀನುಗಳಿಗೆ ಉಪಯೋಗಿಸುತ್ತಿರುವ ರಸಗೊಬ್ಬರ,ಕ್ರಿಮಿನಾಶಕದ ಬೆಲೆ ಗಗನಕ್ಕೇರಿದ್ದು ಕೂಡಲೇ ಇವುಗಳ ದಳ ಇಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ನಂತರ ತಹಸೀಲ್ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುಧ್ಧ ಘೋಷಣೆಗಳನ್ನು ಕೂಗಿ ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ,ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ,ಹುಣಸಗಿ ತಾಲೂಕು ಗೌರವಾಧ್ಯಕ್ಷ ಸಾಹೇಬಗೌಡ ಮದಲಿಂಗನಾಳ,ಅಂಬ್ರೇಶ ಸಾಹು ಹಯ್ಯಾಳ,ಶಿವನಗೌಡ ರುಕ್ಮಾಪುರ,ಹನುಮಗೌಡ ನಾರಾಯಣಪುರ,ಗದ್ದೆಪ್ಪ ನಾಗಬೇವಿನಾಳ,ಅವಿನಾಶ ಕೊಡೇಕಲ್,ತಿಪ್ಪಣ್ಣ ಜಂಪಾ,ಚಂದ್ರು ವಜ್ಜಲ್,ವೆಂಕಟೇಶ ಕುಪಗಲ್,ಚಾಂದಪಾಶಾ ಮಾಲಗತ್ತಿ,ಭೀಮನಗೌಡ ಕಮತಗಿ,ಹಣಮಂತ್ರಾಯ ದೇಸಾಯಿ ಕರ್ನಾಳ,ಹಣಮಂತ ಕರ್ನಾಳ,ರಾಘು ಕುಪಗಲ್,ಭೀಮನಗೌಡ ಕರ್ನಾಳ,ಹಣಮಂತ್ರಾಯ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here