ಕನಕ ಗುರುಪೀಠದಲ್ಲಿ ಸಸಿ ನೆಟ್ಟು ಶ್ರಾವಣದ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆ

0
11

ಸುರಪುರ:ತಾಲೂಕಿನ ತಿಂಥಣಿ ಬ್ರಿಡ್ಜ ಬಳಿಯಿರುವ ಶ್ರೀ ಕನಕಗುರುಪೀಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಧಾರ್ಮೀಕ ಸಭೆಯನ್ನು ಶ್ರೀ ಮಠದಲ್ಲಿ ಸಸಿ ನಡುವ ಮೂಲಕ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸಿದರು.

ನಂತರ ಮಾತನಾಡಿದ ಆರ್.ವಿ.ನಾಯಕ, ಈ ಭಾಗದಲ್ಲಿ ಕನಕ ಗುರುಪೀಠವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಧರ್ಮವನ್ನು ರಕ್ಷೀಸುತ್ತಾ ಬಂದಿದೆ ಇಲ್ಲಿಯ ಗುರುಗಳಾದ ಶ್ರೀ ಶ್ರೀ ಸಿದ್ಧರಾಮನಂದಪುರಿ ಸ್ವಾಮೀಜಿಯವರು ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡುತ್ತಾ ಬಂದಿದ್ದಾರೆ ಅವರ ಮಾರ್ಗದರ್ಶನದಲ್ಲಿ ಸಮಾಜವು ಮಾದರಿಯಾಗಿ ಹೊರಹೊಮ್ಮುತ್ತಿದೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಇರಬೇಕು ಎಂದರು.

Contact Your\'s Advertisement; 9902492681

ಕಳೆದ ಕೆಲವುದಿನಗಳಿಂದ ಶ್ರೀಗಳು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಏಳಿಗೆಗೆ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಅನಾರೋಗ್ಯದಿಂದ ಬಳುತ್ತಿರುವುದು ನಮ್ಮ ಎಲ್ಲಾ ಭಕ್ತರಿಗೆ ಗಾಬರಿಯಾಗಿದೆ ದೇಶದ ಧಾರ್ಮೀಕ ಜಗತ್ತು ಬೆಳೆಯಲು ಶ್ರೀಗಳ ಆರೋಗ್ಯವು ಬೇಗ ಸುಧಾರಿಸಲು ನಾವೆಲ್ಲಾ ಭಕ್ತರುಗಳು ಆ ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಶ್ರೀ ಸಿದ್ಧರಾಮನಂದಪುರಿ ಸ್ವಾಮೀಜಿಯವರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಮುಂಖಡರಾದ ವಿಠ್ಠಲ ಯಾದವ, ಬ್ಲಾಕ ಕಾಂಗ್ರೇಸ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹುಕಾರ, ರವಿ ಸಾಹುಕಾರ ಆಲ್ದಾಳ, ಹೆಚ್.ಆರ್.ಮಕಾಶಿ, ಭಂಡಾರಿ ನಾಟೇಕರ, ಯಮುನಪ್ಪ ಮಾಸ್ಟರ ಬಪ್ಪರಗಿ, ಯಮನೂರಿ ಯಣ್ಣೀವಡಗೇರಿ, ಬಸವರಾಜ ದೊಡಮನಿ, ಮಾನಯ್ಯ ಸಾಹುಕಾರ ಬಂಡೊಳಿ, ದೇವಪ್ಪ ಗುರು ಹುಣಸಿಹೊಳೆ, ಕನಕಾಚಲ ನಾಯಕ ಜಾಗೀರದಾರ, ಮಾನಯ್ಯ ಮೇಟಿ ಬಂಡೊಳ್ಳಿ, ಶರಣು ಶಾಂತಪೂರ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here