ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಪದಾಧಿಕಾರಿಗಳ ನೇಮಕ

0
33

ಸುರಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಗೆ ತಾಲೂಕು ಘಟಕ ಸೇರಿ ವಿವಿಧ ಶಾಖೆಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಸಭೆಯ ಅಧ್ಯಕ್ಷತೆವಹಿಸಿದ್ದ ಸಂಘಟನೆಯ ಕಲಬುರಗಿ ವಿಭಾಗೀಯ ಪ್ರಧಾನ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿ,ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ೮೦ ರ ದಶಕದಲ್ಲಿ ಪ್ರೋ ಬಿ ಕೃಷ್ಣಪ್ಪನವರು ಆರಂಭಿಸಿದರು,ಅದರಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ರಾಜ್ಯದಲ್ಲಿ ಭೂ ಹೋರಾಟ,ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ,ದೇವದಾಸಿ ಪದ್ಧತಿ ವಿರುದ್ಧ ಹೋರಾಟ,ಜೀತ ಪದ್ಧತಿ,ಅನಿಷ್ಠ ಪದ್ಧತಿಗಳ ವಿರುದ್ಧ ಚಳವಳಿ ರೂಪಿಸಿದೆ.ದಲಿತರಿಗೆ ಹಳ್ಳಿಗಳಲ್ಲಿ ಸ್ವಾಭೀಮಾನದಿಂದ ಬದುಕಲು ಕಲಿಸಿಕೊಟ್ಟಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಉಪಪ್ರಧಾನ ಸಂಚಾಲಕ ಮಾಳಪ್ಪ ಕಿರದಳ್ಳಿ ಮಾತನಾಡಿ,ತಾಲೂಕು ಸಮಿತಿಯು ಹಳ್ಳಿಗಳಿಗೆ ಹೋಗಿ ನಮ್ಮ ಜನರ ಕಷ್ಟ ಮತ್ತು ಸಮಸ್ಯೆಗಳಿಗೆ ಸ್ಪಂಧಿಸಬೇಕು,ತಾಲೂಕು ಮಟ್ಟದಲ್ಲಿ ಹೋರಾಟಗಳನ್ನು ರೂಪಿಸುವಂತೆ ಕರೆ ನೀಡಿದರು.ನಂತರ ಜಿಲ್ಲಾ ಸಂಘಟನಾ ಸಂಚಾಲಕ ರಮೇಶ ಅರಕೇರಿ ಮತ್ತಿತರರು ಮಾತನಾಡಿದರು.ರಾಜು ದೊಡ್ಮನಿ ಸ್ವಾಗತಿಸಿದರು,ಮಲ್ಲು ಕಟ್ಟಿಮನಿ ಮುಷ್ಠಹಳ್ಳಿ ನಿರೂಪಿಸಿದರು,ಗೊಲ್ಲಾಳಪ್ಪ ಕಿರದಳ್ಳಿ ವಂದಿಸಿದರು.

ಪದಾಧಿಕಾರಿಗಳು: ಶರಣಪ್ಪ ತಳವಾರಗೇರಾ (ತಾ.ಪ್ರಧಾನ ಸಂಚಾಲಕ),ಗೊಲ್ಲಾಳಪ್ಪ ಕಟ್ಟಿಮನಿ,ಬಸವರಾಜ ಮಂಗಳೂರು,ಮಲ್ಲು ಕಟ್ಟಿಮನಿ ಮುಷ್ಠಹಳ್ಳಿ,ಮಾನಪ್ಪ ಬಳಬಟ್ಟಿ ಬೋನ್ಹಾಳ,ಪ್ರಕಾಶ ಮುಷ್ಠಹಳ್ಳಿ,ಮಲ್ಲು ಕೆ.ಸಿ.ಪಿ,ಪರಶುರಾಮ ಸಾಸನೂರು ಹಾಗು ಮಾನಪ್ಪ ಮೂಲಿಮನಿ (ತಾ.ಸಂಘಟನಾ ಸಂಚಾಲಕರು) ವಿವಿಧ ಗ್ರಾಮ ಪಂಚಾಯತಿ ಶಾಖೆಯ ಸಂಚಾಲಕರು:ಕೆಂಚಪ್ಪ ಕಟ್ಟಿಮನಿ ಸಂಚಾಲಕರು ವಾಗಣಗೇರ,ಬಲಭೀಮ ಹಾದಿಮನಿ ಸಂಚಾಲಕರು ತಳವಾರಗೇರಾ,ಬಸವರಾಜ ದೊಡ್ಮನಿ ಸಂಚಾಲಕರು ಶಖಾಪುರ,ಹಣಮಂತ ಹೊಸ್ಮನಿ ಸಂಚಾಲಕರು ಯಕ್ತಾಪುರ,ಸದಾನಂದ ಕಟ್ಟಿಮನಿ ಸಂಚಾಲಕರು ಕರಡಕಲ್,ಸುರೇಶ ಸಾಸನೂರು ಸಂಚಾಲಕರು ಕೆಂಭಾವಿ ಟಿ.ಎಮ್.ಸಿ,ನಾಗಪ್ಪ ದೊಡ್ಮನಿ ಸಂಚಾಲಕರು ದೇವಪುರ ಮುಷ್ಠಹಳ್ಳಿ ಹಾಗು ಹಣಮಂತ ಅಂಬಲಿಹಾಳ ಸಂಚಾಲಕರು ಕಿರದಳ್ಳಿಯನ್ನಾಗಿ ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here