ಶ್ರಾವಣ ಮಾಸ ಪ್ರವಚನ ಉದ್ಘಾಟನೆ

0
24

ಭಾಲ್ಕಿ: ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಆಯೋಜಿಸಲಾದ ಒಂದು ತಿಂಗಳು ನಡೆಯುವ ವಚನ ದರ್ಶನ ಪ್ರವಚನದ ಉದ್ಘಾಟನೆಯನ್ನು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ದಿವ್ಯಸನ್ನಿಧಾನಲ್ಲಿ ಜರುಗಿತು.

ಸಾನಿಧ್ಯವಹಿಸಿದ ಪೂಜ್ಯರು ಬಸವಾದಿ ಶರಣರ ವಚನಗಳು ಅಂತರಂಗ ಶುದ್ಧಿಗೆ ದಿವ್ಯ ಔಷಧಿಯಾಗಿವೆ. ಶ್ರಾವಣದ ಒಂದು ತಿಂಗಳು ಪರ್ಯಂತ ಪರಮಪೂಜ್ಯರ ಅಮೃತ ವಾಣಿಯಿಂದ ವಚನಗಳ ಅಂತರಾಳವನ್ನು ತಿಳಿಯುತ್ತ ನಮ್ಮ ಜೀವನವನ್ನು ಶರಣಮಾರ್ಗದಲ್ಲಿ ಮುನ್ನಡೆಸಬೇಕು. ನಾವು ಬಹಿರಂಗವಾಗಿ ಶ್ರೀಮಂತಿಕೆಯನ್ನು ಹೊಂದುತ್ತಿದ್ದೇವೆ. ಆದರೂ ದಿನ ದಿನಕ್ಕೆ ಅಂತರಂಗ ಮಾತ್ರ ರಣರಂಗವಾಗುತ್ತಿದೆ.

Contact Your\'s Advertisement; 9902492681

ಅಂತರಂಗದಲ್ಲಿ ಪ್ರೀತಿ, ದಯೆ, ವಿಶ್ವಾಸ, ಕೃತಜ್ಞತೆ ಮಾನವೀಯತೆ ಮುಂತಾದ ಮೌಲ್ಯಗಳನ್ನು ಬೆಳೆಯಬೇಕಾದರೆ ನಾವು ದಿನನಿತ್ಯ ಶರಣರ ವಚನ ಪಾರಾಯಣ, ವಚನ ಪಠಣ, ವಚನ ಶ್ರವಣ ಮಾಡುವ ಅನಿವಾರ್ಯತೆ ಇದೆ. ಈ ದಿಸೆಯಲ್ಲಿ ಪರಮಪೂಜ್ಯರಾದ ಡಾ.ಬಸವಲಿಂಗ ಪಟ್ಟದ್ದೇವರು ಕಳೆದ ೪೦ ವರ್ಷಗಳಿಂದ ನಿರಂತರವಾಗಿ ಶ್ರಾವಣ ಮಾಸದಲ್ಲಿ ತಾವೇ ಪ್ರವಚನವನ್ನು ಮಾಡುವ ಮೂಲಕ ಶರಣರ ವಚನ ಪ್ರಸಾದವನ್ನು ತಮ್ಮ ಹೃದಯ ತಟ್ಟೆಗೆ ನೀಡುತ್ತಿದ್ದಾರೆ.

ಇಂತಹ ಸದ್ಗುರುಗಳನ್ನು ಪಡೆದ ನಾವೆಲ್ಲರೂ ನಿಜಕ್ಕೂ ಧನ್ಯರು ಎಂದು ನುಡಿದರು. ಸಮಾರಂಭದ ದಿವ್ಯ ನೇತೃತ್ವ ವಹಿಸಿದ ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ಭಜನೆಯನ್ನು ಮಾಡಿಸಿ ಸತ್ಸಂಗದ ಮಹತ್ವವನ್ನು ತಿಳಿಸಿದರು ಹಾಗೂ ಪೂಜ್ಯರ ಪ್ರವಚನವನ್ನು ತಿಂಗಳು ಪರ್ಯಂತ ಎಲ್ಲಾ ಸದ್ಭಕ್ತರು ಆಲಿಸಿ ಶರಣತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಸುಖಿ ಆಗುತ್ತದೆ ಎಂದರು.

ಸಮಾರಂಭದ ಉದ್ಘಾಟನೆಯನ್ನು ಶರಣೆ ಮೀನಾಕ್ಷಿ ಹಾಗೂ ಶರಣ ಬಸವರಾಜ ಮೋಳಕೆರೆ ದಂಪತಿಗಳಿಂದ ಜರುಗಿತು. ಬಸವಗುರುಪೂಜೆಯನ್ನು ಹಿರಿಯ ನ್ಯಾಯವಾದಿಗಳಾದ ರಾಜಶೇಖರ ಅಷ್ಟೂರೆ ಹಾಗೂ ವಿಶ್ವನಾಥಪ್ಪ ಬಿರಾದಾರ ಇವರಿಂದ ಜರುಗಿತು. ಸಮಾರಂಭದಲ್ಲಿ ಚಂದ್ರಕಾಂತ ಬಿರಾದಾರ, ವಿಜಯಕುಮಾರ ಪಾಟೀಲ ಅತಿಥಿ ಸ್ಥಾನವನ್ನು ಅಲಂಕರಿಸಿದರು. ಅಕ್ಕನಬಳಗದಿಂದ ವಚನ ಗಾಯನ ನಡೆಯಿತು. ದೀಪಕ ಥಮಕೆ ನಿರೂಪಿಸಿದರು.

****

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here