ಕಿಟ್ ನೀಡಲು ನೊಂದಾಯಿತ ಕಟ್ಟಡ ಕಾರ್ಮಿಕರು ತಹಸೀಲ್ ಬಳಿ ಧರಣಿ

0
15

ಸುರಪುರ: ನೊಂದಾಯಿತ ಕಟ್ಟಡ ಕಾರ್ಮಿಕರು ಗುರುವಾರ ಮುಂಜಾನೆ ನಗರದ ತಹಸೀಲ್ ಕಚೇರಿ ಮುಂದೆ ಧರಣಿ ನಡೆಸಿ ತಮಗೆ ದಿನಸಿ ಕಿಟ್‍ಗಳನ್ನು ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭಾಗವಹಿಸಿದ್ದ ಅನೇಕ ಜನ ಕಾರ್ಮಿಕರು ಮಾತನಾಡಿ,ನಮಗೆ ಕಿಟ್ ಕೊಡುತ್ತೇವೆ 12ನೇ ತಾರೀಖು ಬನ್ನಿ ಎಂದಿದ್ದರು.ಅದರಂತೆ ನಾವು ಬೆಳಿಗ್ಗೆಯೆ ಬಂದು ಶ್ರೀ ಮಹರ್ಷಿ ವಾಲ್ಮೀಕಿ ಭವನದ ಬಳಿಯಲ್ಲಿ ಸಾಲಲ್ಲಿ ನಿಂತಿದ್ದೇವು,ಒಂದು ಗಂಟೆ ಆದ ನಂತರ ಎಲ್ಲಾ ಕಿಟ್‍ಗಳು ಖಾಲಿಯಾಗಿವೆ ಎಂದು ಹೇಳುತ್ತಿದ್ದಾರೆ.ಆದರೆ ಬನ್ನಿ ಎಂದು ಹೇಳಿದವರು ಈಗ ಕಿಟ್ ಖಾಲಿಯಾಗಿವೆ ಎನ್ನುತ್ತಿದ್ದಾರೆ.ಇದು ಹೇಗೆ ಸಾಧ್ಯ ಎಂದರಲ್ಲದೆ ಯಾರ್ಯಾರಿಗೋ ಬೇಕಾದಷ್ಟು ಕಿಟ್‍ಗಳನ್ನು ಕೊಟ್ಟಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

Contact Your\'s Advertisement; 9902492681

ನಂತರ ಧರಣಿ ಸ್ಥಳಕ್ಕೆ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಆಗಮಿಸಿ ಕಾರ್ಮಿಕರ ಬೇಡಿಕೆಯನ್ನು ಆಲಿಸಿ ಸ್ಥಳಕ್ಕೆ ಕಾರ್ಮಿಕ ಇಲಾಖೆಯ ನಿರೀಕ್ಷಕ ಗಂಗಾಧರ ಅವರನ್ನು ಕರೆಯಿಸಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕಾರ್ಮಿಕರ ನಿರೀಕ್ಷಕ ಗಂಗಾಧರ ಮಾತನಾಡಿ,ಸುರಪುರ ತಾಲೂಕಿನಲ್ಲಿ 13 ಸಾವಿರ ಜನ ನೊಂದಾಯಿತ ಕಾರ್ಮಿಕರಿದ್ದಾರೆ.ಆದರೆ ಇದುವರೆಗೂ 7938 ಕಿಟ್‍ಗಳು ಬಂದಿದ್ದು ಎಲ್ಲವನ್ನು ವಿತರಿಸಿದ್ದೇವೆ.ಇನ್ನುಳಿದವರಿಗೆ ಕಿಟ್ ಬೇಕೆಂದು ಎಲ್ಲಾ ಕಾರ್ಮಿಕರು ಮನವಿ ಸಲ್ಲಿಸಿದರೆ ಅದನ್ನು ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರಲ್ಲದೆ,ನಂತರದಲ್ಲಿ ಕಿಟ್‍ಗಳು ಬಂದಾಗ ಎಲ್ಲರಿಗೂ ವಿತರಿಸುವುದಾಗಿ ತಿಳಿಸಿದರು.

ಇದೆಲ್ಲವನ್ನು ಆಲಿಸಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ತಾವೆಲ್ಲರು ಧರಣಿಯನ್ನು ನಿಲ್ಲಿಸಿ ಮನವಿಯನ್ನು ನೀಡಿ ನಿಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ದೇವಪ್ಪ ನಗರಗುಂಡ,ತಿಮ್ಮಯ್ಯ ತಳವಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here