ನಂಬಿಕೆ ಇರಲಿ ಮೂಢನಂಬಿಕೆ ಬೇಡ: ಶಿವರಂಜನ್ ಡಾ. ಸತ್ಯಂಪೇಟೆ

0
16

ಕಲಬುರಗಿ: ನಂಬಿಕೆ ಇರಲಿ. ಆದರೆ ಮೂಢನಂಬಿಕೆ ಬೇಡ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ ಹೇಳಿದರು.

ಸ್ಲಂ ಜನಾಂದೋಲನ ಕರ್ನಾಟಕ, ಶರಣಕುಮಾರ ಮೋದಿ ಫೌಂಡೇಶನ್ ಹಾಗೂ ಹೈ.ಕ. ಶಿಕ್ಷಣ ಸಂಸ್ಥೆಯ ಮಲಕರೆಡ್ಡಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಂಚಶೀಲ ನಗರದ ಬುದ್ಧ ವಿಹಾರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಬಸವ ಪಂಚಮಿ ಆಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಹಾವು ಮಾಂಸಹಾರಿ ಸರಿಸೃಪ. ಹಾವಿನ ಆಹಾರ ಹಾಲು ಅಲ್ಲವೇ ಅಲ್ಲ. ಹಾವಿಗೆ ಹಾಲೆರೆಯದೆ ಅಪೌಷ್ಠಿಕ ಮಕ್ಕಳಿಗೆ, ಬಡವರಿಗೆ ಹಾಲು ವಿತರಿಸಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಬದುಕಿನ ಅಸಾಯಕ ತಿರುವು ಮುರುವುಗಳು, ಅಗೋಚರ ಶಕ್ತಿಯ ಇರುವಿಕೆಯನ್ನು ನಂಬುವಂತೆ ಮಾಡುತ್ತವೆ. ಮನುಷ್ಯನಿಗೆ ಅಸಾಧ್ಯವೆನಿಸಿದಾಗ ಕಂಡು ಕೇಳಿದ ಅನುಭವಗಳು ನಂಬಿಕೆಗಳಿಗೆ ಅನುವು ಮಾಡಿಕೊಡುತ್ತವೆ. ಆದರೆ ಸರಿಯಾಗಿ ಗಮಿಸಿದರೆ ನಂಬಿಕೊಂಡದ್ದು ಮತ್ತು ಮೂಢರಾಗಿ ಒಪ್ಪಿಕೊಂಡದ್ದು ಬೇರೆ ಬೇರೆಯಾಗಿಯೇ ಕಾಣಿಸುತ್ತವೆ. ಹೀಗಾಗಿ ಹುತ್ತಕ್ಕೆ ಹಾಲೆರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ವಿವರಿಸಿದರು.

ಅತಿಥಿಗಳಾಗಿದ್ದ ಕಾಂಗ್ರೆಸ್ ಮುಖಂಡ ರಾಜಗೋಪಾಲರೆಡ್ಡಿ, ಶರಣಕುಮಾರ ಮೋದಿ ಪೌಂಡೇಶನ್‍ನ ದಶವಂತ ಕಣಮುಸಕರ್ ಮಾತನಾಡಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಹುಲಗೆಪ್ಪ ಕನಕಗಿರಿ, ಐಡಿಎಸ್ ವಲಯ ಮೇಲ್ವಿಚಾರಕಿ ಬೋರಮ್ಮ ಬಿರಾದಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ ವೇದಿಕೆಯಲ್ಲಿ ಇದ್ದರು. ಅಲ್ಲಮಪ್ರಭು ನಿಂಬರ್ಗಾ ನಿರೂಪಿಸಿ ವಂದಿಸಿದರು.

ಲೀಲಾವತಿ ಗಾಯಕವಾಡ, ಶಾಮರಾವ ಶಿಂಧೆ, ಸಿದ್ರಾಮ ಗುಲ್ಲಾಬವಾಡಿ, ಬ್ರಹ್ಮಾನಂದ ಮಂಚದ, ಬಸವರಾಜ ಚಿಂಚನೂರ, ಮಹಾದೇವಿ ಭೀಮಪೂರೆ, ನರಸಿಂಗ ಕುದಂಪುರೆ, ಸಂಜುಕುಮಾರ ಕಾಂಬಳೆ, ಬಾಬುರಾವ ದಂಡಿನಕರ್ ಇದ್ದರು. ಇದೇ ವೇಳೆಯಲ್ಲಿ ಸುಮಾರು 100 ಮಕ್ಕಳಿಗೆ ಮಲಕರೆಡ್ಡಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತವಾಗಿ ರಾಗಿ ಮಾಲ್ಟ್, ಹಾಲು ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here