ಸುರಪುರ: ತಾಲೂಕಿನ ಲಕ್ಷ್ಮೀಪುರ ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಶ್ರೀಗಿರಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿ ಸೋಮವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಪೂಜ್ಯರಾದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಮೊದಲನೇ ಸೋಮವಾರವಾದ 16ನೇ ತಾರೀಖು ಬೆಳಿಗ್ಗೆ ಗೋ ಪೂಜೆ ನಂತರ ಇಷ್ಟಲಿಂಗ ಮಹಾಪೂಜೆ ಹಾಗು ಶಿವಾನುಭವ ಗೋಷ್ಠಿ ನಡೆಯಲಿದೆ.ಎರಡನೇ ಸೋಮವಾರ 23ನೇ ತಾರೀಖು ಬೆಳಿಗ್ಗೆ ಗೋ ಪೂಜೆ,ಇಷ್ಟಲಿಂಗ ಪೂಜೆ ಹಾಗು ಶಿವಾನುಭವ ಗೋಷ್ಠಿ ನಡೆಯಲಿದೆ.
3ನೇ ಸೋಮವಾರವಾದ 30ನೇ ತಾರೀಖು ಲಿಂ.ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ 9ನೇ ವರ್ಷದ ಗಣಾರಾಧನೆ,ಶ್ರೀ ರುದ್ರ,ಬಿಲ್ವಾರ್ಚನೆ,ಮಹಾಮಂಗಳಾರತಿ ಜರುಗಲಿದೆ ಜೊತೆ ಗೋ ಪೂಜೆ ಇಷ್ಟಲಿಂಗ ಪೂಜೆ ಮತ್ತು ಶಿವಾನುಭವ ಗೋಷ್ಠಿ ಮತ್ತು ಗೋಶಾಲೆಯನ್ನು ಆರಂಭಿಸಲಾಗುವುದು.4ನೇ ಸೋಮವಾರವಾದ ಸಪ್ಟೇಂಬರ್ 06ನೇ ತಾರೀಖು ಬೆಳಿಗ್ಗೆ ಗೋ ಪೂಜೆ ಇಷ್ಟಲಿಂಗ ಮಹಾಪೂಜೆ ಮತ್ತು ಶಿವಾನುಭವ ಗೋಷ್ಠಿ ನಡೆಯಲಿದೆ.5ನೇ ಸೋಮವಾರ ಸಪ್ಟೆಂಬರ್ 13 ರಂದು ಬೆಳಿಗ್ಗೆ ಗೋ ಪೂಜೆ,ನಂತರ ಇಷ್ಟಲಿಂಗ ಪೂಜೆ ಮತ್ತು ಶಿವಾನುಭವ ಗೋಷ್ಠಿ ಸಂಜೆ ರಥೋತ್ಸವ ಜರುಗಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಆಗಮಿಸಿ ಕೋವಿಡ್ ನಿಯಮಗಳೊಂದಿಗೆ ಭಾಗವಹಿಸುವಂತೆ ಕರೆ ನೀಡಿದ್ದಾರೆ.