ಟೈಲರ್ ಕಾರ್ಮಿಕರಿಗೆ ಕೋವಿಡ್ ಕಿಟ್ ವಿತರಣೆ

0
8

ಸುರಪುರ:ನಗರದ ರಂಗಂಪೇಟೆಯ ಅಂಬಾಭವಾನಿ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಯಾದಗಿರಿ ,ಕರ್ನಾಟಕ ರಾಜ್ಯ ಅಸಂಘಟಿತ ಟೈಲರ್ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಇವರ ಸಹಯೋಗದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ರಂಗಂಪೇಟೆಯ ನೊಂದಾಯಿತ ಅಸಂಘಟಿತ ಟೈಲರ್ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಗಂಗಾಧರ ಮಾತನಾಡಿ,ಅಸಂಘಟಿತ ಕಾರ್ಮಿಕರು ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾಗಿದ್ದಾರೆ ಎಂದು ಸರಕಾರ ಅವರ ನೆರವಿಗೆ ಆಗಮಿಸಿದ್ದು,ಅದರಂತೆ ಟೈಲರ್ ಕೆಲಸ ಮಾಡುವವರು ತೊಂದರೆಗೊಳಗಾಗಿದ್ದನ್ನು ಮನಗಂಡು ಕಿಟ್‍ಗಳನ್ನು ನೀಡಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷರಾದ ಗಂಗಾಧರ ಅವರಿಗೆ ಹಾಗು ವೈದ್ಯಾಧಿಕಾರಿ ಓಂಪ್ರಕಾಶ ಅಂಬುರೆ,ತಹಸೀಲ್ ಸಿರಸ್ಥೇದಾರ ಸುನಿಲ್ ಪುಲ್ಸೆ,ವೆಂಕಟೇಶ,ಯಾದಗಿರಿ ಕಾರ್ಮಿಕ ಇಲಾಖೆಯ ಸಂತೋಷಕುಮಾರ್,ದೀಪಕಸಿಂಗ್ ಹಾಗು ಸುರಪುರ ಕಾರ್ಮಿಕ ಬಂಧುಗಳಾದ ಬಸವರಾಜ ಪೂಜಾರಿ,ರಾಜು ಕಲಾಲ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ನಂತರ ಎಲ್ಲಾ ನೊಂದಾಯಿತ ಟೈಲರ್ ಕಾರ್ಮಿಕರಿಗೆ ಕಿಟ್‍ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಾಜು ಪುಲ್ಸೆ,ಭೂಮದೇವ ಮಹೇಂದ್ರಕರ್,ಗೋಪಾಲ ಬಾಸುತ್ಕರ್,ಭೀಮು ಪತಂಗೆ,ಮುರಳಿ ಅಂಬುರೆ,ಸತೀಶ ಬಾಸುತ್ಕರ್,ಸಂತೋಷ ಬಾಸುತ್ಕರ್,ಸಂತೋಷ ಮಹಿಂದ್ರಕರ್,ವಿಜಯ ಪುಲ್ಸೆ,ಅಂಬಾದಾಸ ಮಹೇಂದ್ರಕರ್,ಅಭಿಷೇಕ್ ಪತಂಗೆ,ಸುಮಿತ್ ಮಹೇಂದ್ರಕರ್,ಹಿತೇಶ ಗವಳ್ಕರ್,ಪವನ ಮಾಳದ್ಕರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here