ಕಲಬುರಗಿ: ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿನ ಚಿಮ್ಮಲಗಿ ಎನ್‌ಕ್ಲೇವ್ ನೆಲಮಹಡಿಯ ಕಚೇರಿಯಲ್ಲಿ ಐಐಟಿ, ಜೆಇ, ನೀಟ್ ತರಬೇತಿಯನ್ನು ನೀಡಲಾಗುವುದು ಎಂದು ಆಸ್ಕ್ ಐಐಟಿಯನ್ಸ್ ಹಿರಿಯ ಶಿಕ್ಷಣ ಸಲಹೆಗಾರ ಅನಿರುದ್ಧ ಕಾಂಚಿ ಅವರು ಇಲ್ಲಿ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಕೇವಲ 45000ರೂ.ಗಳು ಹಾಗೂ ಫೌಂಡೇಷನ್ ತರಗತಿಗಳಿಗೆ 25000ರೂ.ಗಳು ಕಡಿಮೆ ಶುಲ್ಕದಲ್ಲಿ ತರಬೇತಿ ಕೊಡಲಾಗುವುದು ಎಂದರು.
ತರಬೇತಿ ಪಡೆಯಲು ಇಚ್ಛಿಸುವವರು ಮೊಬೈಲ್ ನಂಬರ್ ೮೮೬೭೫೧೫೭೬೭, ೮೯೭೧೮೨೫೫೧೧ಗೆ ಕರೆ ಮಾಡಲು ಇಲ್ಲವೇ ಕೇಂದ್ರಕ್ಕೆ ಭೇಟಿ ನೀಡಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಪಾಟ್ನಾದ ಐಐಟಿ ಬೆಳ್ಳಿ ಪದಕ ವಿಜೇತ ವಿಜಯ್ ಮುಕತಿ, ಹಿಮಾಚಲ ಪ್ರದೇಶದ ಮಂಡಿ ಐಐಟಿಯ ಚಿನ್ನದ ಪದಕ ವಿಜೇತ ಸೊಹರಭಸಿಂಗ್ ಗ್ರೇವಾಲ್, ನೀಟ್ ಶ್ರೇನಿಯ ಅಧ್ಯಾಪಕ ಆಸಿಫ್‌ಖಾನ್ ಪಠಾಣ್, ಸಹಾಯಕರಾದ ಶಶಿಧರ್ ಮತ್ತು ಪಾಟೀಲ್ ಅವರು ಉಪಸ್ಥಿತರಿದ್ದರು.