ಬಸ್ ನಲ್ಲಿ 2 ಲಕ್ಷ ಮೌಲ್ಯದ ಚಿನ್ನದ ಸರ ಮರಳಿಸಿ ಮಾನವೀಯ ಮೆರೆದ ಸಿಬ್ಬಂದಿ ರಾಘವೇಂದ್ರ

0
173

ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ನಲ್ಲಿ ಇಂದು ಬಿಜಾಪುರದಿಂದ ಕಲಬುರಗಿಗೆ ಪ್ರಯಾಣಿಸುತ್ತಿದ್ದ ಗ್ರಾಹಕ ಎರಡು ಲಕ್ಷಕ್ಕೂ ಅಧೀಕ ಮೌಲ್ಯದ ಚಿನ್ನದ ಸರ ಬಸ್ ನಲ್ಲಿ ಬಿಟ್ಟು ಹೋಗಿರುವುದನ್ನು ಬಸ್ ಚಾಲಕ ಮರಳಿಸಿ ಮಾನವೀಯತೆ ಮೆರೆದಿರುವುದು ಕಲಬುರಗಿ ಸಾರಿಗೆ ಇಲಾಖೆಯಲ್ಲಿ ನಡೆದಿದೆ.

ಬಿಜಾಪೂರ ಜಿಲ್ಲೆಯ ಯರಗಲ್ ನುವಾಸಿ ಮಹೇಶ್ ಬಡಿಗೇರಿ ಚಿನ್ನ ಕಳೆದುಕೊಂಡ ಪ್ರಯಾಣಿಕ. ಪ್ರಯಾಣದ ನಂತರ ಮಹೇಶ್ ಚಿನ್ನದ ಸರ ಇರುವ ಬ್ಯಾಕ್ ಬಸ್ ನಲ್ಲಿ ಬಿಟ್ಟು ಹೋಗಿದ್ದರು.

Contact Your\'s Advertisement; 9902492681

ಬಸ್ ಕಾರ್ಯಾಚರಣೆ ನಡೆಸಿ ಘಟಕಕ್ಕೆ ಮರಳಿದ ಬಸ್ ಚಾಲಕ ರಾಘವೇಂದ್ರ ಬಿಲ್ಲೆ ಸಂಖ್ಯೆ 6809 ಹಾಗೂ ನಿರ್ವಾಹಕ ಖಂಡೋಬಾ 679 ಬ್ಯಾಗ್ ಗಮನಸಿ ಸದರಿ ಚಿನ್ನ ಇರುವುದನ್ನು ಗಮನಿಸಿದರು.

ನಂತರ ಬಸ್ ಘಟಕ-1 ವ್ಯವಸ್ಥಾಪಕ ಮಂಜುನಾಥ ಮಾಯಣ್ಣನವರ್ ಗೆ ಮಾಹಿತಿ ನೀಡಿದರು. ನಂತರ ಬ್ಯಾಗ್ ಮಹೇಶ್ ಬಡಿಗೇರ್ ಗೆ ಸೇರಿದನು ಖಾತ್ರಿ ಪಡಿಸಿಕೊಂಡು ಅವರಿಗೆ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

ಚಾಲಕ ಮಹೇಶ್ ಕಾರ್ಯಾಕ್ಕೆ ಮಂಜುನಾಥ್ ಮಾಯಣ್ಣನವರ್ ಅಭಿನಂದನೆ ಸಲ್ಲಿಸಿದರು. ಘಟಕದ ಚಾರ್ಜ್ ಮ್ಯಾನ್ ರಮೇಶ್ ತಾಳಿಕೋಟಿ, ಸಹಾಯಕ ಸಂಚಾರಿ ನಿರೀಕ್ಷಕರಾದ ಅಣ್ಣಾರಾವ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here