ಮಾಧ್ಯಮ ಅಕಾಡೆಮಿ ಸದಸ್ಯ ದೇವೀಂದ್ರಪ್ಪ ಕಪನೂರಕರ್ ಗೆ ಸನ್ಮಾನ

0
27

ಕಲಬುರಗಿ: ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಸದಸ್ಯರಾಗಿ ನೇಮಕಗೊಂಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಕಾರ್ಯದರ್ಶಿ ದೇವೀಂದ್ರಪ್ಪ ಹೆಚ್ ಕಪನೂರಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಕಲಬುರಗಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸೋಮವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ನಗರ ಪೆÇಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಾಧ್ಯಮ ಸಮಾಜದ ಕಣ್ಣುಗಳು ಇದ್ದ ಹಾಗೆ, ಸಮಾಜದಲ್ಲಿ ನಡೆಯುವ ಪ್ರತಿ ಘಟನೆಯನ್ನು ಪೆÇಲೀಸ್ ಅಧಿಕಾರಿಗಳು ಗಮನಕ್ಕೆ ತರುವಲ್ಲಿ ಮಾಧ್ಯಮ ಪಾತ್ರ ಬಹಳಷ್ಟಿದೆ. ಅಂತಹ ಮಾಧ್ಯಮ ಕ್ಷೇತ್ರದಿಂದ ಮಾಧ್ಯಮ ಅಕಾಡೆಮಿಗೆ ಆಯ್ಕೆಯಾದ ದೇವೀಂದ್ರಪ್ಪ ಕಪನೂರ ಅವರ ಈ ಸಾಧನೆ ಅಪಾರವಾಗಿದೆ ಎಂದು ಅವರು ತಿಳಿಸಿದರು.

ಮಾಧ್ಯಮ ಕ್ಷೇತ್ರ ಇದು ಸಮಾಜದಲ್ಲಿ ಎಲ್ಲರನ್ನು ಆಗಾಗ ಬಡಿದೇಬ್ಬಿಸಿ, ಎಚ್ಚರಗೊಳಿಸುವ ಪ್ರಮುಖ ಕ್ಷೇತ್ರವಾಗಿದೆ ಎಂದರು.

ಇದೇ ವೇಳೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ದಯಾನಂದ ಅಗಸರ ಅವರು ಮಾತನಾಡಿ. ನಮ್ಮ ಭಾಗದಲ್ಲಿ ಸಹ ಉತ್ಕøಷ್ಟ ಮಟ್ಟದ ಪ್ರತಿಭೆಗಳಿವೆ ಅದನ್ನು ಗುರುತಿಸುವ ಕೆಲಸ ಸರ್ಕಾರದಿಂದ ಆಗಬೇಕು. ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಗೌರವ ಲಭಿಸುವಂತೆ ಮಾಡಿದ್ದು, ಮಾಧ್ಯಮ ಸಮೂಹವಾಗಿದೆ ಎಂದು ತಿಳಿಸಿದರು.
ದೇವೀಂದ್ರಪ್ಪ ಕಪನೂರ ಅವರಿಗೆ ಲಭಿಸಿರುವ ಈ ಗೌರವ ಈ ಭಾಗದ ಎಲ್ಲಾ ಜನರಿಗೆ ಸಿಕ್ಕಂತಹ ಗೌರವವಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಶೈಲಂ-ಸುಲಫಲ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರದ ಮಹಾಸ್ವಾಮೀಜಿ, ಸಮಾಜದಲ್ಲಿ ಎಲ್ಲರನ್ನು ತಿದ್ದುವ ಗುಣ ಪತ್ರಕರ್ತರಿಗಿದೆ. ತಪ್ಪು ದಾರಿಯಲ್ಲಿ ಸಾಗುವವರನ್ನು ಸರಿ ದಾರಿಗೆ ಕೊಂಡೊಯ್ಯುವ ಶಕ್ತಿ ಮಾಧ್ಯಮಕ್ಕಿದೆ. ಆ ಕ್ಷೇತ್ರದಲ್ಲಿ ಶ್ರಮಿಸಿದ ದೇವೀಂದ್ರಪ್ಪ ಕಪನೂರ ಅವರಿಗೆ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಗುಣಧರ್ಮ ಇದೆ ಎಂದು ನುಡಿದರು.

ಸನ್ಮಾನ ಹಾಗೂ ಅಭಿನಂದನೆ ಸ್ವೀಕರಿಸಿದ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕಾರ್ಯಕಾರಿಣಿ ಕಾರ್ಯದರ್ಶಿ ದೇವೀಂದ್ರಪ್ಪ ಹೆಚ್. ಕಪನೂರಕರ್ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಿಂದ ಮಾಧ್ಯಮ ಅಕಾಡೆಮಿಗೆ ಆಯ್ಕೆಯಾಗಿರುವುದರಿಂದ ಈ ಭಾಗದ ಪತ್ರಕರ್ತರಿಗೆ ಸಿಗಬೇಕಾದ ಎಲ್ಲಾ ರೀತಿ ಸೂಕ್ತ ಗೌರವ, ಪ್ರಶಸ್ತಿ ಲಭಿಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮ ವಹಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಇದೆ ವೇಳೆ ರಂಗಾಯಣದ ನಿರ್ದೇಶಕ ಪ್ರಭಾಕರ್ ಜೋಷಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಸಿದ್ದೇಶ್ವರಪ್ಪ ಜಿ. ಬಿ ಅವರು ಉಪಸ್ಥಿತರಿದ್ದರು.

ಶರಣಯ್ಯ ಹಿರೇಮಠ ಅವರು ಕಪನೂರ ಅವರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ದೇವೀಂದ್ರಪ್ಪ ಅವಂಟಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅರುಣ ಕದಂ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ಪತ್ರಕರ್ತರು ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here