ಶಹಾಬಾದ:ಜಿಲ್ಲಾ ಪಂಚಾಯತಿ ಮತ್ತು ತಾಲೂಕಾ ಪಂಚಾಯತಿ ಚುನಾವಣೆ ವಷಾರ್ಂತಕ್ಕೆ ನಡೆಯಲಿದ್ದು ಪಕ್ಷದ ಮುಖಂಡರು, ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕೆಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ ಹೇಳಿದರು.
ಅವರು ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಬಿಜೆಪಿ ಎಸ್‍ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯುವ ಮೋರ್ಚಾ ಕಾರ್ಯಕರ್ತರು ಮುಂದಾಗಬೇಕು.ಅಲ್ಲದೇ ಪ್ರತಿಯೊಬ್ಬರೂ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಬೇಕು.ಜನರು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಬಿಜೆಪಿ ದಲಿತರ ಹಾಗೂ ಮುಸ್ಲಿಮರ ವಿರೋಧಿಯಲ್ಲ.ಆದರೆ ಕಾಂಗ್ರೆಸ್ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ರಾಜಕೀಯ ಲಾಭ ಪಡೆಯುತ್ತಿದೆ.
ಆದರೆ ಅವರ ಆಶಯಗಳಿಗೆ ತಕ್ಕಂತೆ ಎಂದಿಗೂ ನಡೆದುಕೊಂಡಿಲ್ಲ.ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ ಚಿಂತನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದು, ಅಲ್ಪಸಂಖ್ಯಾತರ ದಲಿತರ ಅಭಿವೃದ್ಧಿಗಾಗಿ ಬಿಜೆಪಿ ಪ್ರಯತ್ನಿಸುತ್ತಿದೆ.ಆದ್ದರಿಂದ ಬಿಜೆಪಿಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮುಂಗಬೇಕೆಂದು ಹೇಳಿದರು.
ಈಲ್ಲಾ ಎಸ್‍ಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಿನಾರಾಯಣ ಚಿಮಣಚೂರ,ಶಾಂತವೀರ ಬಡಿಗೇರ, ನಗರ ಎಸ್‍ಸಿ ಮೋರ್ಚಾ ಅಧ್ಯಕ್ಷ ಸಂಜಯ ವಿಠಕರ್, ಮಂಡಲ ಉಪಾಧ್ಯಕ್ಷ ಮಹಾದೇವ ಗೊಬ್ಬೂರಕರ್,ಸದಾನಂದ ಕುಂಬಾರ, ಅಮರ ಕೋರೆ, ಸುಭಾಷ ಕುಸಾಳೆ, ಉಮೇಶ ಪೊಚ್ಚಟ್ಟಿ, ಸಂತೋಷ ಹುಲಿ, ಶಾಮ ಕೋರೆ, ಹಣಮಂತ ಖೇತ್ರೆ, ಶ್ರೀನಿವಾಸ ದೇವಕರ, ರವಿ ಹಳ್ಳಿ, ತಿಪ್ಪಣ್ಣ ಕಣಸೂರ, ಅರುಣ ದೇವಕರ್, ನಾರಾಯಣ ಕಂದಕೂರ ಇತರರು ಇದ್ದರು.