ಶಹಾಬಾದ: ಬಿಜೆಪಿಗೆ ಹೆಚ್ಚು ಯುವಜನರನ್ನು ಸೆಳೆಯುವ ನಿಟ್ಟಿನಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ ಹೇಳಿದರು.
ಅವರು ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಸೈಕಲ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಸರಕಾರ ಬಂದ ಮೇಲೆ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.ಪಕ್ಷದಲ್ಲಿ ಯಾರು ದುಡಿಯುತ್ತಾರೆ ಅವರಿಗೆ ಸ್ಥಾನಮಾನ ಸಿಗುವುದು ಮಾತ್ರ ಶತಸಿದ್ಧ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ನಾವೆಲ್ಲರೂ ಮಾಡಬೇಕಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಂದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟನಲ್ಲಿ ಕೆಲಸವಾಗಬೇಕಿದೆ ಎಂದು ಹೇಳಿದರು.
ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಸರ್ವ ಜನಾಂಗಗಳ ಕಲ್ಯಾಣಕ್ಕಾಗಿ ಯೋಜನೆಗಳು ಜಾರಿಗೊಂಡಿವೆ. ಯುವ ಮೋರ್ಚಾ ಕಾರ್ಯಕರ್ತರು ಪಕ್ಷದ ಸಾಧನೆಯನ್ನು ಜನ ಸಾಮಾನ್ಯರಿಗೆ ಮನದಟ್ಟು ಮಾಡುವ ಮೂಲಕ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮವಹಿಸಬೇಕೆಂದು ಹೇಳಿದರು.
ಯುವ ಮೋರ್ಚಾ ಅಧ್ಯಕ್ಷ ದಿನೇಶ ಗೌಳಿ, ಪ್ರಧಾನ ಕಾರ್ಯದರ್ಶಿ ರಾಕೇಶ ಮಿಶ್ರಾ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್, ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಮಹಾದೇವ ಗೊಬ್ಬುರಕರ್, ದುರ್ಗಪ್ಪ ಪವಾರ, ಶಶಿಕಲಾ ಸಜ್ಜನ, ಅಣೆಪ್ಪ ದಸ್ತಾಪೂರ, ಮುಖಂಡರಾದ ನಾಗರಾಜ ಮೇಲಗಿರಿ, ನಿಂಗಣ್ಣ ಹುಳಗೊಳಕರ್, ಸಂಜಯ ಸೂಡಿ, ನಾರಾಯಣ ಕಂದಕೂರ, ಜಯಶ್ರೀ ಸೂಡಿ, ದೇವೆಂದ್ರ ಯಲಗೂಡ, ಆರತಿ ಕೂಡಿ, ಪವನ ಜಾಧವ, ಅವಿನಾಶ ಸಾಳುಂಕೆ, ಉಮೇಶ ನಿಂಬಾಳಕರ್, ಆಶಿಷ ಮಂತ್ರಿ, ಬಾಬುರಾವ ಕೋಬಾಳ, ಅಮಿತ ಠಾಕೂರ, ಪ್ರಭು ಪಾಟೀಲ್, ಶ್ರೀನಿವಾಸ ನೇದಲಗಿ, ಶರಣು ಕೌಲಗಿ, ಕಿರಣ ದಂಡಗುಲಕರ್, ವಿನಾಯಕ ಗೌಳಿ, ನಗರಸಭೆ ಸದಸ್ಯ ಜಗದೇವ ಸುಭೆದಾರ, ಯಲ್ಲಪ್ಪ ದಂಡಗುಲಕರ್, ವಿಶ್ವರಾಧ್ಯ ಮಠಪತಿ, ಅಮೂಲ ಪೊದ್ದಾರ, ಉದಯ ನಂದಗೌಳಿ, ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದರು.