ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ

0
199

ಕಲಬುರಗಿ : ತಾಲೂಕಿನ ಪಾಣೇಗಾಂವ ಗ್ರಾಮದ ಶಿವಾಜಿ ತಾಂಡಾದಲ್ಲಿ ಸಂತ ಸೇವಾಲಾಲ್ ಕಮಿಟಿ ಹಾಗೂ ಗೋರ್ ಸೇನಾ ಗೋರ್ಸಿಕ್ವಾಡಿಯ ವೇದಿಕೆ ನೇತೃತ್ವದಲ್ಲಿ ಕಮಾಂಡೋ, ಸಂಜೀವ ಪವಾರ,ವೀಣಾ ಎಸ್. ಪವಾರ ದಂಪತಿಯ ಮಕ್ಕಳಾದ ವಿಘೇಶ,ರಿತ್ವಿಕಾ 8ನೇ ಹುಟ್ಟು ಹಬ್ಬ ಅಂಗವಾಗಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಿರುವ ಮಕ್ಕಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಗ್ರಾಮದ 39 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ನೋಟಬುಕ್ ಮತ್ತು ಪೆನ್ ವಿತರಣಾ ಕಾರ್ಯಕ್ರಮ ಮಾಡಿ ಪ್ರೋತ್ಸಾಹ ನೀಡ ಲಾಯಿತು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖಣದಾಳ ಗ್ರಾ. ಪಂ. ಉಪಾಧ್ಯಕ್ಷ ಕಾಂತು ಚವಾಣ, ಮಾತನಾಡಿ, ಗ್ರಾಮದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪಾಸಾಗಿ ಗ್ರಾಮದ ಗೌರವ,ಕೀರ್ತಿ ಹೆಚ್ಚಿಸಿದ್ದಾರೆ. ಪಾಲಕರಲ್ಲಿ ವಿದ್ಯಾರ್ಥಿಗಳ ಬಗ್ಗೆ ಪ್ರೀತಿ, ಆತ್ಮವಿಶ್ವಾಸ ಮೂಡಿದೆ ಎಂದರು. ಮುಂದೆ ಕೂಡಾ ಇದೇ ರೀತಿ ವಿದ್ಯಾಭ್ಯಾಸ ಮಾಡಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ದಿವ್ಯ ಸಾನಿಧ್ಯ ವಹಿಸಿ ಶ್ರೀ ಶಂಕರ್ ಮಹಾರಾಜ್, ಮಾತನಾಡಿ ವಿದ್ಯಾರ್ಥಿ ಜೀವನ ಅಂದ್ರೆ ಬಂಗಾರ ಜೀವನ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಚೆನ್ನಾಗಿ ಓದಿ ಬದುಕು ಕಟ್ಟಿಕೊಳ್ಳಲು ಶ್ರಮ ಪಡಬೇಕು ಎಂದು ಆಶೀರ್ವಾದ ಮಾಡಿದರು.

ಗ್ರಾ. ಪಂ. ಸದಸ್ಯ ನಾಗೇಶ್ ಮಚಖೇಡ ಮಾತಾನಾಡಿ, ಕಮಾಂಡೋ ಸಂಜೀವ ಪವಾರ್ ಹಾಗೂ ಪತ್ನಿ ವೀಣಾ ಎಸ್ ಪವಾರ ದಂಪತಿ ಮಾಡುತ್ತಿರುವ ಕೆಲಸ ಅತ್ಯಂತ ಅದ್ಭುತವಾಗಿದೆ. ದೇಶದ ಗಡಿಯಲ್ಲಿ ಕರ್ತವ್ಯದಲ್ಲಿದ್ದರರೂ ಸಹ ಅವರ ಮಕ್ಕಳ ಹುಟ್ಟು ಹಬ್ಬ ಸಾಮಾನ್ಯ ವಾಗಿ ಅದ್ದೂರಿ ಆಚರಣೆ ಮಾಡುವ ಬದಲು ಜನ್ಮದಿನದ ನಿಮಿತ್ಯ ವಿಶೇಷ ವಾಗಿ ಗ್ರಾಮದ ಎಸ್ಎಸ್ಎಲ್ಸಿ ಪಾಸಾದ 39 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್, ಪೆನ್, ಪಠ್ಯ ಪುಸ್ತಕ ವಿತರಣೆ ಹಾಗೂ ಸನ್ಮಾನ ಮಾಡಿ ಮಾದರಿಯಾಗಿದ್ದಾರೆ ಎಂದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಗ್ರಾ.ಪಂ. ಸದಸ್ಯರಾದ ಶಂಕರ್ ಕಾರಭಾರಿ, ಕಿಶನ್ ರಾಠೋಡ, ಮೊಹಮ್ಮದ್ ಹುಸೇನ್ ಸಾಬ್, ಹಾಗೂ ವೀಣಾ ಎಸ್. ಪವಾರ ಇವರು ಬಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ ನೀಡಿ ಸನ್ಮಾನ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವರಾಮ ಚವಾಣ, ಕುಪ್ಪಣ್ಣ ರಾಠೋಡ, ವೆಂಕಟ ಪವಾರ, ಹರಿಶ್ಚಂದ್ರ ಜಾಧವ, ಎಮನಾಥ ರಾಠೋಡ, ಮೊಹಮ್ಮದ್ ನಾಸೀರ, ದಾಮಲು ಪವಾರ ಹಾಗೂ ಜೀತಾಲಾಲ್ ರಾಠೋಡ, ಶ್ರೀಮತಿ ವೀಣಾ ಸಂಜೀವ ಪವಾರ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here