ಶಹಾಬಾದ: ನಗರದ ಸರಕಾರಿ ಪ್ರಿ-ಮ್ಯಾಟ್ರಿಕ್ ಬಾಲಕರ ವಸತಿ ನಿಲಯದ ವಿದ್ಯಾರ್ಥಿ ಆಕಾಶ ರಾಜು ಎಸ್‍ಎಸ್‍ಎಲ್‍ಸಿಯಲ್ಲಿ 625ಕ್ಕೆ 559 (89.44) ಅಂಕಗಳನ್ನು ಪಡೆದಿದ್ದಾನೆ.
ಒಟ್ಟು 21 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅಗ್ರಶ್ರೇಣಿಯಲ್ಲಿ-01, ಪ್ರಥಮ ಶ್ರೇಣಿಯಲ್ಲಿ-18, ದ್ವೀತೀಯ ಶ್ರೇಣಿಯಲ್ಲಿ-02 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ವಸತಿ ನಿಲಯದ ಎಲ್ಲಾ ಅಧಿಕಾರಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.