ದೇಶ ವಿಭಜಿಸಿದ ವಿಭಂಜಕ ಶಕ್ತಿಗಳ ವಿರುದ್ಧ ಹೋರಾಟ ನಿರಂತರ: ಪಾಟೀಲ

0
8

ಆಳಂದ: ದೇಶ ವಿಭಜನೆಯ ಕರಾಳ ದಿನಕ್ಕೆ ಮುನ್ನುಡಿ ಬರೆದ ರಾಷ್ಟ್ರದ ವಿಭಂಜಕ ಶಕ್ತಿಗಳ ವಿರುದ್ಧ ಭಜರಂಗದಳದ ಹೋರಾಟ ಕಿಚ್ಚಿನಿಂದ ಮುಂದುವರೆಯಬೇಕು ಎಂದು ರಾಜ್ಯ ಬಿಜೆಪಿ ಯುವ ಮುಖಂಡ ಭೀಮಾಶಂಖರ ಪಾಟೀಲ ಅವರು ಹೇಳಿದರು.

ಪಟ್ಟಣದ ಶ್ರೀರಾಮ ಮಂದಿರದಲ್ಲಿ ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ರಾವಿ ನದಿಯ ಮೇಲೆ ಅಣೆಮಾಡಿ ಯಾವುದೇ ಕಾರಣಕ್ಕೂ ದೇಶ ವಿಭಜಿಸುವುದಿಲ್ಲ ಎಂದವರು ಮಧ್ಯ ರಾತ್ರಿ ಅಖಂಡ ಭಾರತ ವಿಭಜಿಸಿ ವಿಜೃಂಭಿಸಿದ್ದು ದೇಶದ ಯುವ ತರುಣರು ಮರೆಯಬಾರದು. ಆ ಸಾಮಥ್ರ್ಯ ತೀರ್ಮಾನಕ್ಕೆ ನಾವು ಇಂದಿಗೂ ಬೆಲೆ ತರುತ್ತಿದ್ದೇವೆ. ಅಂಥವರ ಸಂತತಿಯ ವಿರುದ್ಧ ಭಜರಂಗದಳ ನಿರಂತರ ಹೋರಾಟ ಮಾಡುವುದುರ ಮೂಲಕ ಅಖಂಡ ಭಾರತ ಸಂಕಲ್ಪಕ್ಕೆ ಜೀವ ತುಂಬುವ ಕೆಲಸ ಮಾಡಡಬೇಕು ಎಂದರು.

ಭಗತ್‍ಸಿಂಗ್, ಚಂದ್ರಶೇಖರ ಅಜಾದ್, ಸುಭಾಷಶ್ಚಂದ್ರ ಬೋಸ್, ರಾಜಗುರು, ಸುಖದೇವ ಸೇರಿದಂತೆ ಸಾವಿರಾರು ತರುಣ ವೀರರ ತ್ಯಾಗಬಲಿದಾನಗಳ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದು ನಾವು ಸ್ಮರಿಸಲೇಬೇಕು.

ಬಾಲಗಂಗಾಧರ್ ತಿಲಕರ ದೇಶ ಪ್ರೇಮವೀರ ಸಾರ್ವಕರ್ ಕ್ಷಾತ್ರ ತೇಜದ ಕಿಡಿಗಳು ಈ ದೇಶವನ್ನು ಬೆಳಗುತ್ತಿವೆ. ದೇಶದ ಕೆಲ ವಿದ್ರೋಹಿ ಶಕ್ತಿಗಳು ಸಾರ್ವಕರ್‍ರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ತಗಳುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಸಾರ್ವಕರ್ ರೋಮಕ್ಕೂ ಸಮವಲ್ಲದವರು ಇಂದು ಸಾರ್ವಕರ್‍ರ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಸ್ಪದ. ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಗತ್ತಿಸಿದರೂ ಭಾರತೀಯರ ಮನದಲ್ಲಿ ಅಖಂಡ ಭಾರತದ ಕ್ರಾಂತಿ ಕಿಡಿ ಇನ್ನೂ ಪ್ರಜ್ವಲಿಸುತ್ತಿರಲು ಇಂಥ ವೀರರ ತ್ಯಾಗ ಬಲಿದಾನಗಳೇ ಕಾರಣ ಇಂಥ ವೀರಪರಂಪರೆಯ ಇತಿಹಾಸ ಹೊಂದಿರುವ ನಾವು ಅಖಂಡ ಭಾರತದ ಸಂಕಲ್ಪ ಸಕಾರಗೊಳ್ಳವವರೆಗೂ ಹೋರಾಡೋಣ ಎಂದು ಅವರು ಹೇಳಿದರು.

ಭಜರಂಗದಳ ತನ್ನ ವಿಶಿಷ್ಟ ಮಾದರಿಯ ಹೋರಾಟಗಳಿಂದ ಹೆಸರುವಾಸಿಯಾದ ಯುವ ತರುಣರ ಗಟ್ಟಿ ಸಂಘಟನೆ ದೇಶ ಮತ್ತು ದೇಶದ ಸಂಸ್ಕøತಿಗೆ ಧಕ್ಕೆಯಾದರೆ ನಿರ್ಭಯದದಿಂದ ಮುನ್ನುಗ್ಗುವ ಭಜರಂಘದಳ ಹಲವಾರು ಯಶಸ್ವಿ ಹೋರಾಟಗಳನ್ನು ಮಾಡಿ ದೇಶದ ಯುವ ಜನತೆಯ ಮನದಲ್ಲಿ ಭದ್ರಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.

ಸ್ವದೇಶಿ ಜಾಗರಣಣ ಮಂಚನ್ ಉತ್ತರ ಕನಾಟಕ ಕಾರ್ಯಕಾರಣಿ ಸದಸ್ಯ ಎಸ್.ಸಿ. ಪಾಟೀಲ ಅವರು ಬೌದ್ಧಿಕ ತಗೆದುಕೊಂಡರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಕಾರ್ಯವಾಹಕ ಶರಣು ಕುಂಬಾರ, ಮಹೇಶ ಹಿರೋಳಿ, ಸತೀಶ ಮೇತ್ರೆ, ಸುನೀಲ್ ಸಿಂಧೆ, ಆಕಾಶ ಕಾಲೇಕರ್, ಸಾಗರ ಸುತಾರ, ಶುಭಂ ಮಿಸ್ಕಿನ್, ಭಜರಂಗದಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here