ನಿಂಬಾಳ ಗ್ರಾಪಂ ಕಚೇರಿಯ ಮುಂದೆ ದಲಿತ ಸೇನೆ ಪ್ರತಿಭಟನೆ

0
20

ಆಳಂದ: ತಾಲೂಕಿನ ನಿಂಬಾಳ ಗ್ರಾಮ ಪಂಚಾಯತನಲ್ಲಿ ಅವ್ಯವಹಾರ ಕೈಗೊಂಡಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಸಿ ದಲಿತ ಸೇನೆಯ ಗ್ರಾಮ ಶಾಖೆ ಕಾರ್ಯಕರ್ತರು ಗ್ರಾಪಂ ಕಚೇರಿಯ ಮುಂದೆ ಪ್ರತಿಭಟನೆ ಕೈಗೊಂಡು ಒತ್ತಾಯಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸೇರಿ ಪಂಚಾಯತಗೆ ಬಾರದೆ ಅಭಿವೃದ್ಧಿಗೆ ಬಂದ ಅನುದಾನವನ್ನು ಸಿಬ್ಬಂದಿ ಕೈಯಲ್ಲಿ ದಾಖಲೆ ತರಿಸಿಕೊಂಡು ಕಲಬುರಗಿ ಲಾಜಿನಲ್ಲಿ ಮತ್ತು ಮನೆಯಲ್ಲಿ ಕುಳಿತುಕೊಂಡು ದಾಖಲೆಯಲ್ಲೇ ಕಾಮಗಾರಿ ಕೈಗೊಂಡು ಹಣವನ್ನು ಎತ್ತಿಹಾಕಿದ್ದಾರೆ. ಈ ಕುರಿತು ಸಮಗ್ರವಾಗಿ ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Contact Your\'s Advertisement; 9902492681

ಕಾಮಗಾರಿ ಮಾಡದೆ ಅನುದಾನ ಎತ್ತಿಹಾಕಿರುವ ತಪ್ಪಿತಸ್ಥರ ಮೇಲೆ ತಾಪಂ ಹಾಗೂ ಜಿಪಂ ಅಧಿಕಾರಿಗಳು ಎಚ್ಚೇತುಕೊಂಡು ತಕ್ಷಣವೇ ತನಿಖೆ ಆರಂಭಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಘಟನಾ ಸ್ಥಳಕ್ಕೆ ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿದ ಅವರು, ಈ ಕುರಿತು ಕಾಲಾವಕಾಶ ನೀಡಿದರೆ ಕೂಲಂಕುಶವಾಗಿ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಕುಳುಹಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿಡ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ದಲಿತ ಸೇನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ತಾಲೂಕು ಅಧ್ಯಕ್ಷ ಧಮಾರ್ಅ ಬಂಗರಗಿ, ಜಿಲ್ಲಾ ಅಂಗವಿಕಲ ಒಕ್ಕೂಟದ ಅಧ್ಯಕ್ಷ ಶರಣು ಕವಲಾ, ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಕೋಚ್ಚಿ, ಮುಖಂಡ ದತ್ತಾ ಕಡಗಂಚಿ, ಲಕ್ಷ್ಮಣಾ ನಿಂಬಾಳ, ಮಂಜು ಸಿಂಗೆ, ಸಂದೀಪ ಕಾಂಬಳೆ, ಮಹೇಂದ್ರೆ ಸಿಂಗೆ, ನೀಲಕಂಠ ಕಾಂಬಳೆ, ವಸಂತ ಕುಮಸಿ, ಶಿವಲಿಂಗ ಮಾಡ್ಯಾಳಕರ್, ತುಕಾರಾಮ ನಿಂಬರಗಾ, ಚಂದ್ರಕಾಂತ ಹೊಸಮನಿ, ದತ್ತಾ ಕಟ್ಟಿಮನಿ, ಲಕ್ಷ್ಮಣ ಹೋಳಿಕೇರಿ, ಬಸಣ್ಣ ಘೋಳ, ಸಂತೋಷ ಪಟೇದ್, ನಾಗಪ್ಪ ತಳಕೇರಿ, ಜೈ ಭೀಮ ದ್ಯಾವಂತಗಿ, ಪರಮೇಶ್ವರ ಬಡದಾಳ, ಕ್ರಾಂತಿವೀರ ಮೇಲಿನಕೇರಿ ಮತ್ತು ಜೀವನ ವಾಘ್ಮೋರೆ ಮತ್ತಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here