ಶಹಾಬಾದ: ಭಗತ್ ಸಿಂಗ್, ನೇತಾಜಿ ಅವರು ಕನಸು ಕಂಡ ಮಾನವನಿಂದ ಮಾನವನ ಶೋಷಣೆಯ ಮುಕ್ತ ಸಮಾಜವಾದಿ ಭಾರತದ ನಿರ್ಮಾಣ ನಮಗಿರುವ ಏಕೈಕ ಮಾರ್ಗವಾಗಿದೆ ಎಂದು ಎಐಡಿಎಸ್‍ಓ ಉಪಾಧ್ಯಕ್ಷ ರಮೇಶ ದೇವಕರ್ ಹೇಳಿದರು.
ಅವರು ನಗರದ ಎಐಡಿಎಸ್‍ಓ ಕಚೇರಿಯಲ್ಲಿ ಬುಧವಾರ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಎಐಡಿಎಸ್‍ಓ ಸಂಘಟನೆ ಆಯೋಜಿಸಲಾದ ವಿದ್ಯಾರ್ಥಿ ಸಂಕಲ್ಪ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಖುದಿರಾಂ ಬೋಸ್, 18ನೇ ವರ್ಷಕ್ಕೆ ನೇಣು ಕುಣಿಕೆಗೆ ತನ್ನ ಕೊರಳನ್ನು ಒಡ್ಡಿ ಹುತಾತ್ಮರಾದರು.
ಇದೇ ರೀತಿಯಾಗಿ ಬ್ರಿಟಿಷರ ಹೃದಯದಲ್ಲಿ ನಡುಕವನ್ನು ಹುಟ್ಟಿಸಿ, ಕೊನೆಯವರೆಗೂ ಹೋರಾಡಿ ಹುತಾತ್ಮರಾದವರಲ್ಲಿ ಚಂದ್ರಶೇಖರ್ ಆಜಾದ್‍ರವರೂ ಒಬ್ಬರು. ಹಾಗೆಯೇ, ಭಾರತದ ಐಕ್ಯತೆಗೆ ಗುರುತಿಸಿಕೊಂಡಿದ್ದ, ಅಶ್ಫಾಕ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್‍ರು ನೇಣಗಂಬವನ್ನು ಧೀರತನದಿಂದ ಏರಿದರು. ನಂತರ ಬಂದದ್ದು, ಭಗತ್ ಸಿಂಗ್ ಮತ್ತು ನೇತಾಜಿ ಸುಭಾμïಚಂದ್ರ ಬೋಸ್, ಇವರು ಸ್ವಾತಂತ್ರ್ಯ ಹೋರಾಟದ ಪತಾಕೆಯನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ದರು. ಇವರ “ಯುವಕರು ಕ್ರಾಂತಿಕಾರಿ ವಿಚಾರವನ್ನು ದೇಶದ ಮೂಲೆಮೂಲೆಗೂ ಹರಡಬೇಕಿದೆ.
ಇಂದಿಗೂ ಎμÉ್ಟೂೀ ಜನ ಬದುಕಲು ಸರಿಯಾದ ನೆಲೆ ಸಿಗದೆ ಬೀದಿ ಬದಿಗಳಲ್ಲಿ ವಾಸಿಸುತ್ತಿದ್ದಾರೆ.ವಿದ್ಯಾರ್ಥಿ-ಯುಜನರಿಗೆ ಸರಿಯಾದ ಶಿಕ್ಷಣ ,ಉದ್ಯೋಗ ಸಿಗದೆ ಕೆಟ್ಟ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ಮತ್ತೊಂದೆಡೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬಂದಿವೆ. ಜಾತಿ-ಧರ್ಮಗಳ ಹೆಸರಿನಲ್ಲಿ ಜನಗಳ ವiರಣ, ದೇಶದ ಇಂದಿನ ಪರಿಸ್ಥಿತಿ. ಈಗ ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲನೇ ಹಾಗೂ ಎರಡನೇ ಅಲೆಯು ಜನರ ಜೀವನವು ಇನ್ನು ಸಂಕಷ್ಟಕ್ಕೆ ತಳ್ಳಿದೆ.
ಎಐಡಿಎಸ್‍ಓ ಸದಸ್ಯರಾದ ಕಿರಣ್ ಜಿ ಮಾನೆ, ಸಾಕ್ಷಿ ಜಿಮಾನೆ,ಬಾಬು ಪವರ್ ಇದ್ದರು.