ಆಳಂದ: ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡಿ ಒಳ್ಳೆಯ ಮನುಷ್ಯನಾಗಿ ನಿರ್ಮಾಣ ಮಾಡುವ ಶಕ್ತಿ ಮತ್ತು ಸರ್ವೋತೊಮುಖ ಅಭಿವೃದ್ಧಿ ಮಾಡುವುದು ಶಿಕ್ಷಣದಿಂದ ಮಾತ್ರ ಸಾದ್ಯವಿದೆ ಎಂದು ಶಾಸಕ ಸುಭಾಷ ಆರ್ ಗುತ್ತೇದಾರ ಹೇಳಿದರು.
ಶುಕ್ರವಾರ ಆಳಂದ ತಾಲೂಕಿನ ಮಾದನಹಿಪ್ಪರಗಾದಲ್ಲಿ ಶಿಕ್ಷಣ ಇಲಾಖೆ ಕರ್ನಾಟಕ ಪಬ್ಲಿಕ್ ಶಾಲೆಗೆ 2ಕೋಟಿ ವೆಚ್ಚದ ಕೋಣೆ ಹಾಗೂ ಸುತ್ತುಗೊಡೆ ಕಾಮಗಾರಿಗೆ ಪೂಜೆ ನೆರವೆರಿಸಿ ಮಾತನಾಡಿದರು.
ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯಡಿ 14 ವರ್ಷ ಒಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆಯನ್ನು ಮಾಡಿದೆ. ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸಾಕಷ್ಟು ಹಣ ಖರ್ಚು ಮಾಡುತ್ತಿದೆ ಗ್ರಾಮೀಣಿ ಭಾಗದಲ್ಲೂ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿ ಒಂದೆ ಕಡೆ ಕನ್ನಡ ಮತ್ತು ಇಂಗ್ಲೀಷ್ ಮಾದ್ಯಮದಲ್ಲಿ ಕಲಿಯಲು ಅವಕಾಶ ನೀಡಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದ್ದರೂ ಸಹ ಅದಕ್ಕೆ ಬೇಕಾದ ಪೂರಕ ವಾತಾವರಣ ಮತ್ತು ಸೌಲಭ್ಯಗಳನ್ನು ಕಡೆಗಣಿಸುವಂತಿಲ್ಲ ಹೀಗಾಗಿ 2ಕೋಟಿ ವೆಚ್ಚದಲ್ಲಿ 12 ಕೋಣೆ ಶಾಲೆಗೆ ಸುತ್ತುಗೋಡೆ ನಿರ್ಮಾಣ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ನೀಡಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಸಹಕರಿಸುವುದಾಗಿ ಹೇಳಿದರು.
ಸಾನಿದ್ಯ ವಹಿಸಿದ ಶ್ರೀ ಅಭಿವ ಶಿವಲಿಂಗ ಸ್ವಾಮಿಜಿ ಹಾಗೂ ಶ್ರೀ ಶಾಂತವೀರ ಶಿವಾಚಾರ್ಯರು ಮಾತನಾಡಿ, ಸರಕಾರಿ ಶಾಲೆಗಳು ಕೂಡಾ ಇಂದು ಖಾಸಗಿ ಶಾಲೆಗಿಂತ ಉತ್ತಮವಾಗಿ ಬೆಳಯುತ್ತಿವೆ ಕೇವಲ ಕಟ್ಟಡ ಆಟದ ಮೈದಾನ ನೋಡಿ ಮಾರು ಹೋಗದೆ ಗುಣಾತ್ಮಕ ಹಾಗೂ ಉತ್ತಮ ಶಿಕ್ಷಣಕ್ಕೆ ಬೆಲೆ ಕೊಡಬೇಕು ಎಂದು ಹೇಳಿದರು.
ಮುಖ್ಯಗುರು ಟಿ.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಮಲ್ಲಿನಾಥ ದುದ್ದಗಿ ಗ್ರಾ.ಪಂ ಉಪಾಧ್ಯಕ್ಷ ಚನ್ನಪ್ಪ ಹಾಲೆನವರ್ ಜಿಪಂ ಮಾಜಿ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಾ.ಪಂ ಮಾಜಿ ಸದಸ್ಯರಾದ ಸಾತಪ್ಪ ಕೊಳಶೆಟ್ಟಿ ಬಸವರಾಜ ಸಾಣಕ, ಮುಖಂಡರಾದ ಮಲ್ಲಿನಾಥ ಪರೇಣಿ ರಾಜಕುಮಾರ ಕಂಬಾರ ಸಿದ್ದರಾಮ ತೋಳನೂರ, ರಾಜಕುಮಾರ ಘೋಳ, ಸೀತರಾಮ ಝಳಕಿ ಶಿವಪ್ಪ ಕೋಳಶೆಟ್ಟಿ, ಗಣೇಶ ಓನಾಮಶೆಟ್ಟಿ, ಶಂಕರ ದುದ್ದಗಿ, ಮಲ್ಲಿನಾಥ ಬಂಬಾಸೆ ಶಂಕರ ಹರಳಯ್ಯ, ಶಿವಲಿಂಗಪ್ಪ ಜಮಾದಾರ, ಬಸವರಾಜ ಶಾಸ್ತ್ರೀ, ಸಿದ್ದಾರಾಮ ತೋಳನೂರ, ಲಿಂಗರಾಜ ಉಡಗಿ, ಲಕ್ಷ್ಮಣ ಹಡಲಗಿ, ಎಇಇ ಗುರುದೇವ ಕಳಸಕರ್ ಸೇರಿದಂತೆ ಇತರರು ಇದ್ದರು.