ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಕೊರೊನ ಮುಕ್ತ ರಾಷ್ಟ ನಿರ್ಮಾಣಕ್ಕೆ ಪ್ರಾರ್ಥನೆ

0
20

ಶ್ರಾವಣ ಮಾಸ ಬಂತೆಂದರೆ ಸಾಕು, ಸಾಲು ಸಾಲು ಹಬ್ಬಗಳ ಸಂಭ್ರಮ. ಅದರಲ್ಲೂ ಈ ಮಾಸದ ಶುಕ್ರವಾರ ಬಂದಿರುವ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ಪಾಮುಖ್ಯತೆ. ಎಲ್ಲೆಲ್ಲೂ ಹೂವು-ಹಣ್ಣುಗಳು, ಹೆಂಗಳೆಯರ ಉತ್ಸಾಹ ಮನೆಮನೆಯಲ್ಲಿ ನೆಲೆಯೂರಿರುತ್ತದೆ. ಸಕಲ ಸಂಪನ್ನಗಳ ತಾಯಿ ಎಂದು ಕರೆಯಲ್ಪಡುವ ವರಮಹಾಲಕ್ಷ್ಮಿಯನ್ನು ಪೂಜಿಸಿದರೆ, ಆಕೆ ಅಷ್ಟೈಶ್ವರ್ಯಗಳನ್ನು ಪ್ರಾಪ್ತಿಸುತ್ತಾಳೆ ಎಂಬ ನಂಬಿಕೆ ಈ ಹಬ್ಬದ ಹಿಂದಿದೆ.

ಇಂದು ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಮೂರ್ತಿಯನ್ನಿಟ್ಟು ಸೀರೆ, ತಾಳಿ, ಬಂಗಾರದ ಆಭರಣ, ಹೂಗಳಿಂದ ಅಲಂಕರಿಸಿ ನೈವೇದ್ಯ ಮಾಡಿ ಈ ಸಂಜೆ ಮುತ್ತೈದೆಯರನ್ನು ಆಮಂತ್ರಿಸಿ ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಡುವುದರ ಮೂಲಕ ಮುತ್ತೈದೆಯರಲ್ಲಿ ಲಕ್ಷ್ಮೀ ರೂಪವನ್ನು ಕಾಣಲಾಗುತ್ತದೆ.

Contact Your\'s Advertisement; 9902492681

ಈ ಹಬ್ಬ ಮಹಿಳೆಯರಿಗೆ ಹೆಚ್ಚು ಪ್ರಮುಖವಾಗಿದ್ದು, ಪೂಜೆಯನ್ನು ಮಾಡಿ ದೇವತೆಗೆ ಪ್ರಾರ್ಥನೆ ಸಲ್ಲಿಸುತ್ತಾ.ಈ ದಿನ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುವ ಮೂಲಕ ಆಕಾಂಕ್ಷೆಗಳು ಈಡೇರುತ್ತವೇ ಎಂದು
ನಂಬಲಾತ್ತೇವೆ.

ಲಕ್ಷ್ಮೀ ದೇವಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ದೇವಿಯ ಆಶೀರ್ವಾದ ಪಡೆಯಲು ವ್ರತ ಅಥವಾ ಉಪವಾಸವನ್ನು ನಡೆಸಲಾಗುತ್ತದೆ. ಲಕ್ಷ್ಮೀ ದೇವಿಯು ಸಂಪತ್ತು, ಅದೃಷ್ಟ ಮತ್ತು ಬುದ್ಧಿವಂತಿಕೆಯ ದೇವತೆಯಾಗಿದ್ದು, ಆದ್ದರಿಂದ ಸಂಪೂರ್ಣ ನಂಬಿಕೆಯಿಂದ ಪ್ರಾರ್ಥಿಸಿದರೆ, ಎಲ್ಲಾ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿ ಮತ್ತು ಈ ಮಾರ್ಗದಲ್ಲಿರುವ ಕೋರೋನದಂತಹ ಎಲ್ಲ ಅಡೆತಡೆಗಳನ್ನು ತೆಗೆದುಹಾಕಲಾಗುತ್ತಲೆಂದು ನಮ್ಮ ಪ್ರಾರ್ಥನೆ ಮಾಡಲಾಯಿತು.

ಜಾಕೀರ್ ಹುಸೇನ್ / ಮಮತಾ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here