ಯಳಸಂಗಿಯಲ್ಲಿ ಸರಳ ಮೊಹರಂ ಆಚರಣೆ

0
176

ಆಳಂದ: ಹಿಂದೂ- ಮುಸ್ಲಿಮರ ಭಾವೈಕ್ಯತೆ ಸಾರುವ ಮೋಹರಮ್ ಹಬ್ಬವು ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಸರಳವಾಗಿ ಆಚರಿಸಲಾಯಿತು.

ಮೊಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರದಂದು ಗ್ರಾಮದ ಮುಖ್ಯ ಬೀದಿಗಳಲ್ಲಿ ಅಲೈ ದೇವರುಗಳ ಮೆರವಣಿಗೆಯು ಸರಳವಾಗಿ ನಡೆಯಿತು.

Contact Your\'s Advertisement; 9902492681

ಗುರುವಾರ ಬೆಳಿಗಿನ ಜಾವ ನಾಲೇ ಹೈದರ್ ದರ್ಗಾದ ಆವರಣದಲ್ಲಿ ಅಗ್ಗಿ ಕಾರ್ಯಕ್ರಮ ನಡೆಯಿತು.ಶುಕ್ರವಾರ ಸಂಜೆ ವೇಳೆ ಅಲಂಗೀರ್ ಪೀರ್ ಗಳ ದಫನ್ ಕಾರ್ಯಕ್ರಮ ಜರುಗಿತು.

ಗ್ರಾಮದ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಭಕ್ತರು ದಿನಪೂರ್ತಿ ನೈವೇದ್ಯ ಸಲ್ಲಿಸಿ, ಸಾಮಾಜಿಕ ಅಂತರದೊಂದಿಗೆ ಜನರು, ಸದ್ಯ ಎದುರಿಸುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್ ನಿಂದ ಮುಕ್ತರಾಗುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಶಾಹ್-ಹುಸೈನಿ ಭಾಷಾ, ನಾಲೇ ಹೈದರ್ , ಬಾರೆ ಇಮಾಮ್- ಇಮಾಮ್ ಖಾಸಿಂ, ಅಬ್ಬಾಸಲಿ ದರ್ಗಾಗಳಲ್ಲಿ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿತ್ತು.

ಮೋಹರಂ ನ ಮುಖ್ಯ ಮೂರು ದಿನಗಳಲ್ಲಿ ಮಹಿಳೆಯರು, ಪುರುಷರು ಉಪಾಸನೆ(ರೋಜಾ) ಕೈಗೊಂಡಿ, ಸಂಜೆ ವೇಳೆ ಇಫ್ತಾರಿ ಮುಗಿಸಿದರು.

ಈ ಸಂದರ್ಭದಲ್ಲಿ ಉತ್ಸವದ ಅಧ್ಯಕ್ಷ ಅಬೂಬಕರ್ ಮಾಡ್ಯಾಳ, ಗ್ರಾಮ ಪಂಚಾಯಿತಿ ಸದಸ್ಯ ಶರಣು ಮಾಂಗ್, ಮಲಾಸಾಬ್ ಮುಲ್ಲಾ, ಪೀರಸಾಬ್ ಅಳ್ಳಗಿ, ಮಾಲಾ ಮುಜಾವರ್, ಭಾಷಾಸಾಬ್ ಅತ್ತಾರ್, ನಬಿಸಾಬ್, ಮಕ್ತುಮ ನದಾಫ್, ಅಮ್ಜದ್ ಮುಲ್ಲಾ,ಶರಣಪ್ಪ ಟಕ್ಕಳಕಿ,ಫತ್ರುದ್ದೀನ್ ನದಾಫ್, ಸದ್ದಾಮ್ ಅತ್ತಾರ್, ಸಿದ್ದಪ್ಪ ಕೊಂಡಗುಳಿ, ಮಲ್ಲಿಕಾರ್ಜುನ್ ಧಬಾಡೆ, ಖಾಸಿಂ ಮಾಡಿಯಾಳ, ಮೋಹಸಿನ್ ನದಾಫ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here